ನಿಮ್ಮನ್ನು ಬೆಂಬಲಿಸಿ ಮತ ಹಾಕಿದ್ದೇನೆ: ತ್ರಿವಳಿ ತಲಾಖ್ ನಿಷೇಧಿಸುವಂತೆ ಪ್ರಧಾನಿ ಮೋದಿಗೆ ಮುಸ್ಲಿಂ ಮಹಿಳೆ ಪತ್ರ
ಸಾಮಾಜಿಕ ಪಿಡುಗಾಗಿರುವ ತ್ರಿವಳಿ ತಲಾಖ್ ನಿಷೇಧಿಸಿ ಎಂದು ಇಬ್ಬರು ಮಕ್ಕಳ ತಾಯಿ, ತ್ರಿವಳಿ ತಲಾಖ್ ಸಂತ್ರಸ್ತೆ ಮತ್ತು ಗರ್ಭಿಣಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ...
ಲಕ್ನೋ: ಸಾಮಾಜಿಕ ಪಿಡುಗಾಗಿರುವ ತ್ರಿವಳಿ ತಲಾಖ್ ನಿಷೇಧಿಸಿ ಎಂದು ಇಬ್ಬರು ಮಕ್ಕಳ ತಾಯಿ, ತ್ರಿವಳಿ ತಲಾಖ್ ಸಂತ್ರಸ್ತೆ ಮತ್ತು ಗರ್ಭಿಣಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೂರನೇ ಮಗುವಿನ ಗರ್ಭಪಾತಕ್ಕೆ ಒಪ್ಪದ ಕಾರಣ ಲಕ್ನೋ ನಿವಾಸಿ ಶಗುಫ್ತಾ ಶಾ ಎಂಬುವವರಿಗೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ನಾನು ಬಿಜೆಪಿಗೆ ಮತಹಾಕಿದ್ದೇನೆ, ಹೀಗಾಗಿ ಸಾಮಾಜಿಕ ಪಿಡುಗಾಗಿರುವ ತ್ರಿವಳಿ ತಲಾಖ್ ನಿಷೇಧಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸುವಂತೆ ಪತ್ರ ಬರೆದಿರುವುದಾಗಿ ಶಹನ್ ಪುರ ನಿವಾಸಿ ಶಗುಫ್ತಾ ಶಾ ಹೇಳಿದ್ದಾರೆ. ಪತ್ರದ ಪ್ರತಿಗಳನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಲಾಗಿದೆ.
ಮೊದಲ ಇಬ್ಬರು ಹೆಣ್ಣು ಮಕ್ಕಳಾಗಿದ್ದು, 3ನೇ ಮಗು ಹೆಣ್ಣಾಗಿ ಹುಟ್ಟಲಿದೆ ಎಂಬ ಭಯದಿಂದ ಶಗುಫ್ತಾಳ ಪತಿ ಶಮ್ಶದ್ ಸಯೀದ್ ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾನೆ. ಇದನ್ನು ಒಪ್ಪದ ಶಗುಫ್ತಾಳನ್ನು ಮನಬಂದಂತೆ ಥಳಿಸಿ, ಮೂರು ಬಾರಿ ತಲಾಖ್ ಹೇಳಿ ತ್ಯಜಿಸಿದ್ದಲ್ಲದೇ, ರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.