ಸಾಂದರ್ಭಿಕ ಚಿತ್ರ 
ದೇಶ

ಹೈದರಾಬಾದ್ ನಲ್ಲಿ ಪತ್ನಿ ನಿಗೂಢ ಸಾವು, ಸೇನಾ ಮೇಜರ್ ಬಂಧನ

ಪತ್ನಿಯ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಮೇಜರ್ ಒಬ್ಬರನ್ನು ಬುಧವಾರ ಹೈದರಾಬಾದ್....

ಹೈದರಾಬಾದ್: ಪತ್ನಿಯ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಮೇಜರ್ ಒಬ್ಬರನ್ನು ಬುಧವಾರ ಹೈದರಾಬಾದ್ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ 29 ವರ್ಷದ ಮೇಜರ್ ವಿಶಾಲ್ ಕುಮಾರ್ ಶರ್ಮಾ ಅವರ ಪತ್ನಿ ಸಮ್ಯಾ ಸಿಂಗ್ ಅವರು ಕಳೆದ ಏಪ್ರಿಲ್ 24ರಂದು  ನಿಗೂಢವಾಗಿ ಸಾವನ್ನಪ್ಪಿದ್ದರು.
ಬೊಲ್ಲಾರಮ್ ನಲ್ಲಿರೋ ಮೇಜರ್ ಮನೆಯಲ್ಲಿ 28 ವರ್ಷದ ಸಮ್ಯಾ ಸಿಂಗ್ ಅವರ ಶವ ಪತ್ತೆಯಾಗಿತ್ತು. ಮೇಜರ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ಇದೊಂದು ಕೊಲೆ ಎಂದು ಆರೋಪಿಸಿ ಸಮ್ಯಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಶರ್ಮಾ ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಮೇಜರ್ ವಿಶಾಲ್ ಕುಮಾರ್ ಶರ್ಮಾ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಸಮ್ಯಾ ಸಿಂಗ್ ಮತ್ತು ವಿಶಾಲ್ ಕುಮಾರ್ ಶರ್ಮಾ ಇಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ

ಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!