ಇಸ್ಲಾಮಾಬಾದ್: ಪಾಕಿಸ್ತಾನ ಭಾರತದ ಗಡಿಯಲ್ಲಷ್ಟೇ ಅಲ್ಲದೇ ಇರಾನ್ ಗಡಿಯಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇರಾನ್ ಗಡಿಯಲ್ಲಿ 10 ಗಡಿ ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದೆ.
ಇರಾನ್ ನ ವಿದೇಶಾಂಗ ಸಚಿವ ಜಾವದ್ ಜರೀಫ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪಾಕಿಸ್ತಾನದ ಯೋಧರು ಇರಾನ್ ಗಡಿಯಲ್ಲಿ ಇರಾನ್ ನ ಗಡಿ ಭದ್ರತಾ ಪಡೆಯ 10 ಸಿಬ್ಬಂದಿಗಳನ್ನು ಹತ್ಯೆ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
"ಇರಾನ್-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗಲು ಅವಕಾಶ ನೀಡುವುದಿಲ್ಲ". ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ನಾಸಿರ್ ಅಲಿ ಖಾನ್ ಹೇಳಿರುವುದಾಗಿ ರೆಡಿಯೋ ಪಾಕಿಸ್ತಾನ್ ವರದಿ ಮಾಡಿದೆ. ಕಳೆದ ವಾರ ಇರಾನ್ ನ ಸಿಸ್ತಾನ್ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಭಯೋತ್ಪಾದಕರು ಇರಾನ್ ಯೋಧರನ್ನು ಹತ್ಯೆ ಮಾಡಿದ್ದರು. ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇರಾನ್ ನ ಪೊಲೀಸ್ ಅಧಿಕಾರಿಗಳು " ಯೋಧರ ಹತ್ಯೆಗೆ ಪಾಕಿಸ್ತಾನ ಸರ್ಕಾರವೇ ಹೊಣೆ" ಎಂದು ಹೇಳಿದ್ದರು.