ದೇಶ

ನನ್ನ ಮಿದುಳು ಸ್ಥಿರವಾಗಿದೆ, ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ; ನ್ಯಾ. ಕರ್ಣನ್

Manjula VN
ನವದೆಹಲಿ: ವೈದ್ಯಕೀಯ ಪರೀಕ್ಷೆಗೊಳಪಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಆದೇಶವನ್ನು ದಿಕ್ಕಿರಿಸಿರುವ ನ್ಯಾಯಾಧೀಶ ಕರ್ಣನ್ ಅವರು, ನನ್ನ ಮಿದುಳು ಸ್ಥಿರವಾಗಿದ್ದು ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ ಎಂದು ಗುರುವಾರ ಹೇಳಿದ್ದಾರೆ. 
ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿಸುವ ನ್ಯಾಯಾಧೀಶ ಕರ್ಣನ್ ಅವರ ಮಾನಸಿಕ ಆರೋಗ್ಯ ಸ್ಥಿತಿಯನ್ನು  ಮೇ.4ರಂದು ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. 
ಆದೇಶದಂತೆಯೇ ಕೋಲ್ಕತಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ತಂಡ ಇಂದು ಕರ್ಣನ್ ಅವರ ನಿವಾಸಕ್ಕೆ ತೆರಳಿತ್ತು. ಈ ವೇಳೆ ವೈದ್ಯಕೀಯ ಪರೀಕ್ಷೆಗೊಳಪಡಲು ಕರ್ಣನ್ ನಿರಾಕರಿಸಿದ್ದಾರೆ. 
ನನ್ನ ಆರೋಗ್ಯ ಸ್ಥಿರವಾಗಿದೆ. ಮಾನಸಿಕವಾಗಿಯೂ ಸ್ಥಿರವಾಗಿದ್ದೇನೆ. ನನಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ವೈದ್ಯಕೀಯ ಪರೀಕ್ಷೆಗೊಳಪಡುವಂತೆ ದಯವಿಟ್ಟು ನನ್ನನ್ನು ಒತ್ತಾಯಿಸಬೇಡಿ ಎಂದು ಹೇಳಿದ್ದಾರೆ. 
ಉನ್ನತ ನ್ಯಾಯಾಲಯದ ನ್ಯಾಯಾಧೀಶರು ಹೊರಡಿಸಿರುವ ಆದೇಶ ನನ್ನ ಮೇಲೆ ಎಸಗಿರುವ ದೌರ್ಜನ್ಯವಾಗಿದೆ. ದಲಿತ ನ್ಯಾಯಾಧೀಶನೊಬ್ಬರನಿಗೆ ಮಾಡಿದ ಅವಮಾನವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ನ ಸಪ್ತಸದಸ್ಯ ಪೀಠದ ನ್ಯಾಯಾಧೀಶರು ರಾಜಿನಾಮೆಯನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. 
SCROLL FOR NEXT