ದೇಶ

ಅಗ್ನಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ

Sumana Upadhyaya
ಬದ್ರಕ್: ಅಗ್ನಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಇಂದು ಬೆಳಗ್ಗೆ 10.22ಕ್ಕೆ ಒಡಿಶಾದ ಧಮರದ ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. 
ಈ ದ್ವೀಪಕ್ಕೆ ಹಿಂದೆ ವೀಲರ್ಸ್ ದ್ವೀಪ ಎಂದು ಹೆಸರಿತ್ತು. ಈ ಪರಮಾಣು ಶಸ್ತ್ರಾಸ್ತ್ರ 2,000 ಕಿಲೋ ಮೀಟರ್ ವ್ಯಾಪ್ತಿ ಶ್ರೇಣಿಯನ್ನು ಹೊಂದಿದೆ.
20 ಮೀಟರ್ ಉದ್ದದ ಅಗ್ನಿ-2 ಕ್ಷಿಪಣಿ ಎರಡು ಹಂತದ ಘನ ಬ್ಯಾಲಿಸ್ಟಿಕ್ ಕ್ಷಿಪಣಿ ಚಾಲಿತವನ್ನು ಒಳಗೊಂಡಿದೆ. ಉಡಾವಣೆ ಸಂದರ್ಭದಲ್ಲಿ 17 ಟನ್ ತೂಕವನ್ನು ಹೊಂದಿದ್ದು 1000 ಕೆಜಿ ಭಾರವನ್ನು 2,000 ಕಿಲೋ ಮೀಟರ್ ವರೆಗೆ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಅಗ್ನಿ ಸರಣಿ ಕ್ಷಿಪಣಿಗಳನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದ್ದು ಪರಮಾಣು ಶಸ್ತ್ರಸಜ್ಜಿತ ನೆರೆ ರಾಷ್ಟ್ರಗಳ ವಿರುದ್ಧ ಭಾರತದ ಅತ್ಯಂತ ಅತ್ಯಾಧುನಿಕ ಶಸ್ತ್ರಾಸ್ತ್ರವಾಗಿದೆ.
SCROLL FOR NEXT