ಶ್ರೀನಗರ: ಭಾರತದ ಭಾಗವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ನ್ನು ಪಾಕಿಸ್ತಾನದ ಪ್ರಾಂತ್ಯ ಎಂದು ಘೋಷಿಸಲು ಯತ್ನಿಸುತ್ತಿರುವುದರ ವಿರುದ್ಧ ಕಾಶ್ಮೀರದ ಜನತೆ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಗಿಲ್ಗಿಟ್ ಬಾಲ್ಟಿಸ್ತಾನ್ ನ್ನು ಪಾಕಿಸ್ತಾನದ 5 ನೇ ಪ್ರಾಂತ್ಯ ಎಂದು ಘೋಷಿಸುವುದರ ವಿರುದ್ಧ ಸೌತ್ ಏಷ್ಯನ್ ಫ್ರೆಂಡ್ಸ್(ಎಸ್ಎಎಫ್) ಸಂಘಟನೆಯ ಸದಸ್ಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಗಿಲ್ಗಿಟ್ ಬಾಲ್ಟಿಸ್ತಾನ್ ಕಾಶ್ಮೀರಿಗಳ ಪ್ರದೇಶವಾಗಿದ್ದು, ಪಾಕಿಸ್ತಾನ ಗಿಲ್ಗಿಟ್ ಬಾಲ್ಟಿಸ್ತಾನ್ ನ್ನು ತನ್ನ ಪ್ರಾಂತ್ಯ ಎಂದು ಘೋಷಿಸುವ ನಿರ್ಧಾರವನ್ನು ಕೈಬಿಡಬೇಕೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸುತ್ತಿದೆ ಎಂದು ಎಸ್ಎಎಫ್ ಸಂಘಟನೆಯ ಸದಸ್ಯ ಮಲೀಕ್ ಆರೋಪಿಸಿದ್ದು, ಪಾಕಿಸ್ತಾನದ ವಿರುದ್ಧ ಮತ್ತಷ್ಟು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.