ಲಖನೌ: ಕಾಗುಣಿತ ಪರೀಕ್ಷೆಯಲ್ಲಿ ಫೇಲ್ ಆದ ಯುವಕನನ್ನು ವಿವಾಹವಾಗಲು ಯುವತಿಯೊಬ್ಬಳು ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಫರೂಖಾಬಾದ್ ನಲ್ಲಿ ಈ ಘಟನೆ ನಡೆದಿದ್ದು ಮೈನ್ಪುರಿಯ ಯುವತಿಯೊಬ್ಬಳು ತನ್ನನ್ನು ವಿವಾಹವಾಗಲು ಬಂದಿದ್ದ ಯುವಕನಿಗೆ ಹಿಂದಿ ಕಾಗುಣಿತ(ಸ್ಪೆಲಿಂಗ್) ಪರೀಕ್ಷೆ ನೀಡಿದ್ದಾಳೆ. ಆದರೆ ಪರೀಕ್ಷೆಯಲ್ಲಿ ಯುವಕ ಫೇಲ್ ಆಗಿದ್ದರಿಂದ ಆ ಯುವಕನನ್ನು ವಿವಾಹವಾಗಲು ಯುವತಿ ನಿರಾಕರಿಸಿದ್ದಾಳೆ.
ಯುವಕನಿಗೆ ಪರಿಶ್ರಮ, ದೃಷ್ಟಿಕೋನ್, ಹಾಗೂ ಸಾಂಪ್ರದಾಯಿಕ್ ಎಂಬ ಪದಗಳ ಕಾಗುಣಿತ ತಿಳಿದಿರಲಿಲ್ಲ, ಅಷ್ಟೇ ಏಕೆ ಸ್ವತಃ ತನ್ನ ಹೆಸರಿನ ಕಾಗುಣತವೂ ಆ ಯುವಕನಿಗೆ ತಿಳಿದಿರಲಿಲ್ಲ. ಕಾಗುಣಿತ ಜ್ಞಾನದ ಪರೀಕ್ಷೆ ಪ್ರಾರಂಭವಾಗಿದ್ದು ಯುವಕನಿಂದಲೇ ಎಂದು ತಿಳಿದುಬಂದಿದ್ದು, ಯುವತಿಗೆ ಕಾಗುಣಿತ ತಿಳಿದಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪೆನ್ ಮತ್ತು ಪೇಪರ್ ನೀಡಿ ಆಕೆಯ ಹೆಸರು ವಿಳಾಸ ಬರೆಯುವಂತೆ ಹೇಳುತ್ತಾನೆ. ನಂತರ ಕೆಲವು ಪದಗಳನ್ನು ಬರೆಯಲು ಹೇಳುತ್ತಾನೆ. ಯುವತಿ ಆತನ ಎಲ್ಲಾ ಪ್ರಶ್ನೆಗಳಿಗೂ ಸಮರ್ಥ ಉತ್ತರ ನೀಡುತ್ತಾಳೆ. ನಂತರ ಆ ಯುವತಿ ಯುವಕನನ್ನೂ ಪರೀಕ್ಷೆ ಮಾಡಿದ್ದಾಳೆ. ಯುವತಿ ಕೇವಲ 5 ನೇ ತರಗತಿ ಓದಿದ್ದರೂ ಆಕೆ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ್ದಾಳೆ. ಆದರೆ ಯುವಕ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ತನ್ನ ಹೆಸರನ್ನು ತಪ್ಪಿಲ್ಲದೇ ಬರೆಯಲು ಆತನಿಗೆ ಸಾಧ್ಯವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics