ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 
ದೇಶ

ತಿಲಕ ಮತ್ತು ಟೊಪ್ಪಿ ನಡುವೆ ತಾರತಮ್ಯವಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಯಾರ ಕುರಿತಂತೆಯೂ ಪಕ್ಷಪಾತ, ಜಾತಿ-ಧರ್ಮದ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಭರವಸೆ...

ಲಖನೌ: ಉತ್ತರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಯಾರ ಕುರಿತಂತೆಯೂ ಪಕ್ಷಪಾತ, ಜಾತಿ-ಧರ್ಮದ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಭರವಸೆ ನೀಡಿದ್ದಾರೆ. 
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಉತ್ತರಪ್ರದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುತ್ತಿರುವ ಪ್ರತೀಯೊಬ್ಬರಿಗು ನಮ್ಮ ಸರ್ಕಾರ ಭದ್ರತೆಯನ್ನು ಒದಗಿಸುತ್ತದೆ. ಆದರೆ, ಅಭಿವೃದ್ಧಿಗೆ ಅಡ್ಡಿಯಾಗುವವರನ್ನು ಸುಮ್ಮನೆ ಬಿಡುವುದಿಲ್ಲ. ಮುಖವಾಡ ಹಾಕಿಕೊಂಡಿರುವವರೂ ಈಗಲಾದರೂ ತಮ್ಮ ನಡೆಯನ್ನು ಸರಿಪಡಿಸಿಕೊಳ್ಳಲಿ. ಇಲ್ಲದೆ ಹೋದರೆ, ಅಂತಹವರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. 
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕೆಲವೊಂದು ಕಡೆ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ. ನಾನು ನನ್ನ ಸರ್ಕಾರದ 100 ದಿನಗಳ ವರದಿಯನ್ನು ನೀಡಿದ ಬಳಿಕ ಇಂತಹ ಘಟನೆಗಳು ಖಂಡಿಯವಾಗಿಯೂ ನಿಲ್ಲುತ್ತದೆ ಎಂಭ ಭರವಸೆ ನನಗಿದೆ ಎಂದಿದ್ದಾರೆ. 
ಉತ್ತರಪ್ರದೇಶದಲ್ಲಿರುವ ಪ್ರತೀಯೊಬ್ಬ ಸಹೋದರಿ, ತಾಯಿ ಮತ್ತು ವ್ಯಾಪಾರಿಗಳು ಸುರಕ್ಷತಾ ಭಾವನೆಯಿಂದ ಬದುಕುವಂತಾಗಬೇಕು. ರಾಜ್ಯದಲ್ಲಿ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲಾಗಿದೆ. 
ಮುಂದಿನ ಸ್ವಚ್ಛ ನಗರ ಸಮೀಕ್ಷೆಯಲ್ಲಿ ಉತ್ತರಪ್ರದೇಶ ರಾಜ್ಯದ 50 ನಗರಗಳು ಪಟ್ಟಿಯಲ್ಲಿರುತ್ತವೆ. ಸಾಮಾನ್ಯವಾಗಿ ಅಧಿಕಾರಕ್ಕೆ ಬರುವ ಹೊಸ ಮುಖ್ಯಮಂತ್ರಿಗಳು ಮೊದಲು ತಮ್ಮ ಆಡಳಿತವನ್ನು ಭದ್ರ ಪಡಿಸಲು ಯತ್ನಿಸುತ್ತಾರೆ. ಹಾಗೆಯೇ ನಾವು ಹಿಂದಿದ್ದ ಅಧಿಕಾರಿಗಳೊಂದಿಗೆಯೇ ಕೆಲಸ ಮಾಡಲು ಯತ್ನ ನಡೆಸಿದ್ದೇವೆ. ತಿಂಗಳುಗಳ ಬಳಿಕ ಅಧಿಕಾರಿಗಳನ್ನು ವರ್ಗಾಯಿಸುತ್ತಿದ್ದೇವೆ. ವ್ಯವಸ್ಥೆ ಬದಲಾಯಿಸಲು ನಿರಾಕರಿಸುತ್ತಿರುವವರು ಅಥವಾ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳದ ಅಧಿಕಾರಿಗಳನ್ನು ಬದಲಿಸುತ್ತಿದ್ದೇವೆ. 
ಉತ್ತರಪ್ರದೇಶದಲ್ಲಿ ನಾವು ಪಾರದರ್ಶಕ ನೀತಿಯನ್ನು ತಂದಿದ್ದೇವೆ. ಕಳೆದ 12-15 ವರ್ಷಗಳು ರಾಜ್ಯದಲ್ಲಿ ವರ್ಗಾವಣೆ ಎಂಬುದು ಒಂದು ರೀತಿಯಲ್ಲಿ ಉದ್ಯಮವಾಗಿ ಹೋಗಿತ್ತು. ಇದೀಗ ಪ್ರತೀಯೊಬ್ಬರು ತಮ್ಮ ವರ್ಗಾವಣೆ ಕುರಿತಂತೆ ಕಾರಣಗಳನ್ನು ನೀಡುತ್ತಿದ್ದಾರೆ. ಪ್ರತೀಯೊಬ್ಬ ಸಚಿವರೂ ಕೂಡ ಅಧಿಕಾರಿಗಳ ವರ್ಗಾವಣೆ ಕುರಿತಂತೆ ಮಾಹಿತಿ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ರೈತರ ಸಮಸ್ಯೆಗಳ ಕುರಿತಂತೆ ಮಾತನಾಡಿರುವ ಅವರು, 2022ರ ವೇಳೆ ರೈತರ ಆದಾಯ ದ್ವಿಗುಣ ಮಾಡಬೇಕೆಂಬುದ ಸರ್ಕಾರ ಉದ್ದೇಶವಾಗಿದೆ. ಸರ್ಕಾರದ ಉದ್ದೇಶಗಳು ಸಾರ್ವಜನಿಕರ ಕಲ್ಯಾಣಕ್ಕಾಗಿ ಆಗಿರಬೇಕೇ ವಿನಃ ಕೇವಲ ಜನಪ್ರಿಯತೆಗಾಗಿ ಮಾತ್ರ ಆಗಬಾರದು. ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video