ದೇಶ

ಭೂ ಹಂಚಿಕೆ ಹಗರಣ: ಸಿಬಿಐಯಿಂದ ಭೂಪಿಂದರ್ ಸಿಂಗ್ ಹೂಡ ವಿಚಾರಣೆ

Lingaraj Badiger
ನವದೆಹಲಿ: 14 ಕೈಗಾರಿಕೆಗಳಿಗೆ ಅಕ್ರಮವಾಗಿ ಭೂಮಿ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಅವರನ್ನು ಸೋಮವಾರ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಹರಿಯಾಣ ಮುಖ್ಯಮಂತ್ರಿ ಹಾಗೂ ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಹೂಡ ಅವರು, ಪಂಚಕುಳದಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್(ಎಜೆಎಲ್) ಸೇರಿದಂತೆ ಇತರೆ ಕೈಗಾರಿಕೆಗಳಿಗೆ ಅಕ್ರಮವಾಗಿ ಪ್ಲಾಟ್ ಹಂಚಿಕೆ ಮಾಡಿದ ಆರೋಪ ಎದುರಿಸಿದ್ದಾರೆ.
'ಹೌದು, ಭೂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ನಾವು ಇಂದು ಹೂಡ ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ' ಎಂದು ಸಿಬಿಐ ವಕ್ತಾರ ಆರ್ ಕೆ ಗೌರ್ ಅವರು ತಿಳಿಸಿದ್ದಾರೆ.
ಪ್ಲಾಟ್ ಹಂಚಿಕೆ ದಿನಾಂಕ ಮುಗಿದ ನಂತರವೂ ನಿಯಮಗಳನ್ನು ಉಲ್ಲಂಘಸಿ 14 ಕೈರಾಗಿಕೆಗಳಿಗೂ ಪ್ಲಾಟ್ ಹಂಚಿಕೆ ಮಾಡಲಾಗಿದ್ದು, ಇದಕ್ಕೆ ಅಂದಿನ ಮುಖ್ಯಮಂತ್ರಿಗಳ ಕಚೇರಿಯಿಂದಲ್ಲೇ ಹಂಚಿಕೆ ಆದೇಶ ಬಂದಿದೆ ಎಂದು ಸಿಬಿಐ ಎಫ್ಐಆರ್ ನಲ್ಲಿ ಉಲ್ಲೇಖಿಸಿದೆ.
SCROLL FOR NEXT