ದೇಶ

ಲಿಯಾಂಡರ್, ರಿಯಾ ನಡುವಿನ ವಿವಾದ ಬಗೆಹರಿಸಲು ಈ ಹಂತದಲ್ಲಿ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Sumana Upadhyaya
ನವದೆಹಲಿ: ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಭಾರತೀಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ಅವರ ಮಾಜಿ ಜೋಡಿ ರಿಯಾ ಪಿಳ್ಳೈ, ವಿವಾದದ ಇತ್ಯರ್ಥ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದ ರಿಯಾ ಅವರ ಪರ ವಕೀಲ, ರಿಯಾ ಅವರು ತಮ್ಮ ಮಗಳಿಗಾಗಿ ಮನೆಯನ್ನು ಕೇಳುತ್ತಿದ್ದು ಅದನ್ನು ನೀಡಲು ಲಿಯಾಂಡರ್ ಪೇಸ್ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿವಾದ ಮಂಡಿಸಿದ ಲಿಯಾಂಡರ್ ಪೇಸ್ ಪರ ವಕೀಲ, ರಿಯಾ ಅವರು ತಮ್ಮ  ಮಾಜಿ ಪತಿ ಸಂಜಯ್ ದತ್ ಅವರಿಂದ ಮನೆಯನ್ನು ಪಡೆದಿದ್ದಾರೆ. ಹಾಗಾಗಿ ಲಿಯಾಂಡರ್ ಪೇಸ್ ಕೊಡಲು ಸಿದ್ಧರಿಲ್ಲ ಎಂದು ಹೇಳಿದರು.
ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಂತದಲ್ಲಿ ಏನು ಹೇಳಲೂ ಸಾಧ್ಯವಿಲ್ಲ. ನಾವು ಎರಡೂ ಕಡೆಯವರಿಗೆ ಬಗೆಹರಿಸಿಕೊಳ್ಳಿ ಎಂದು ಒತ್ತಾಯಪಡಿಸುವುದು ಕಷ್ಟ. ನಾವು ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ ಎಂದು ಹೇಳಿದರು.
ಸರಿಯಾದ ಆದೇಶ ನೀಡಲು ನ್ಯಾಯಪೀಠ ವಿವಾದವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಿ ಮುಂದಿನ ವಿಚಾರಣೆಯನ್ನು ಜುಲೈ 18ಕ್ಕೆ ನಿಗದಿಪಡಿಸಿದೆ.
SCROLL FOR NEXT