ದೇಶ

ಅಮೆಜಾನ್ ಕೆನಡಾದಿಂದ ಮತ್ತೆ ಉದ್ಧಟತನ: ಭಾರತ ಭೂಪಟದ ಸ್ಟಿಕ್ಕರ್ ನಲ್ಲಿ ಯಡವಟ್ಟು

Shilpa D
ನವದೆಹಲಿ: ಆನ್‌ಲೈನ್‌ ಶಾಪಿಂಗ್‌ ಪೋರ್ಟಲ್‌  ಅಮೆಜಾನ್ಮ ಕೆನಡಾ ಮತ್ತೊಮ್ಮೆ ಉದ್ಧಟತನ ಮೆರೆದಿದೆ. ವಿರೂಪಗೊಳಿಸಿದ ಭಾರತದ ಭೂಪಟವನ್ನು ಮಾರಾಟಕ್ಕಿಡುವ ಮೂಲಕ ಯಡವಟ್ಟು ಮಾಡಿದೆ.
ಕೇಸರಿ, ಬಿಳಿ, ಹಸಿರು ತ್ರಿವರ್ಣದ ಭಾರತ ಭೂಪಟವಿರುವ ವಾಲ್‌ ಸ್ಟಿಕ್ಕರ್ ವೊಂದನ್ನು ಅಮೆಜಾನ್‌ ಆನ್‌ಲೈನ್‌ನಲ್ಲಿ  ಮಾರಾಟಕ್ಕಿಟ್ಟಿದ್ದು, ಈ ವಾಲ್‌ ಸ್ಟೀಕರ್‌ನಲ್ಲಿ ಭಾರತದ ಭೂಪಟ ವಿರೂಪಗೊಂಡಿದೆ. ಈ ಸ್ಟಿಕ್ಕರ್ ನಲ್ಲಿ ಜಮ್ಮು ಕಾಶ್ಮೀರ ನಾಪತ್ತೆಯಾಗಿದೆ.
ದೆಹಲಿ ಬಿಜೆಪಿ ಮುಖಂಡ ತಾಜಿಂದ್ರ ಪಾಲ್ ಅಮೆಜಾನ್‌ ಪೋರ್ಟಲ್‌ನಲ್ಲಿ ವಿರೂಪಗೊಂಡ ಭೂಪಟವನ್ನು ಟ್ವೀಟ್‌‌ ಮಾಡಿದ್ದಾರೆ. ತಕ್ಷಣವೇ ವಿರೂಪಗೊಂಡ ಭೂಪಟವನ್ನು ಹಿಂದಕ್ಕೆ ಪಡೆಯಬೇಕೆಂದು ಅವರು ಅಮೆಜಾನ್‌ಗೆ ಆಗ್ರಹಿಸಿದ್ದಾರೆ. 
ಅಮೆಜಾನ್‌ ಉದ್ಧಟತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಮೆಜಾನ್‌ ಈ ಕೃತ್ಯದಿಂದ 2016ರ ಭೂಪ್ರದೇಶ ಮಾಹಿತಿ ನಿಯಂತ್ರಣ ಕಾಯ್ದೆ ಉಲ್ಲಂಘನೆಯಾಗಿದೆ ಎನ್ನಲಾಗಿದೆ. 
SCROLL FOR NEXT