ನವದೆಹಲಿ: ಸಾವಿಗೂ ಮುನ್ನ ಸುನಂದಾ ಮಾತನಾಡಿದ್ದ ಆಡಿಯೋ ರೇಪ್ ಗಳನ್ನು ಪೊಲೀಸರಿಗೆ ನೀಡಿದ್ದೇನೆಂಬ ಪತ್ರಕರ್ತೆಯ ಹೇಳಿಕೆಯನ್ನು ದೆಹಲಿ ಪೊಲೀಸರು ಮಂಗಳವಾರ ನಿರಾಕರಿಸಿದ್ದಾರೆ.
ಸಾವಿಗೂ ಮುನ್ನ ಸುನಂದಾ ಪುಷ್ಕರ್ ಅವರು ನನ್ನೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಧ್ವನಿಮುದ್ರಿಸಿಕೊಳ್ಳಲಾದ 19 ಆಡಿಯೋ ರೇಪ್'ಗಳು ನನ್ನ ಬಳಿಯಿದ್ದು, ಆಡಿಯೋ ಟೇಪ್'ಗಳನ್ನು ದೆಹಲಿ ಪೊಲೀಸರಿಗೆ ನೀಡಿದ್ದೇನೆಂದು ಪತ್ರಕರ್ತೆಯೊಬ್ಬರು ಹೇಳಿದ್ದರು.
ಪತ್ರಕರ್ತೆಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸ್ ಮತ್ತು ವಿಶೇಷ ತನಿಖಾ ದಳದ ಅಧಿಕಾರಿಗಳು, ಪತ್ರಕರ್ತೆಯ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ತನಿಖಾ ದಳದ ಅಧಿಕಾರಿ ಈಶ್ವರ್ ಸಿಂಗ್ ಅವರು, ಈ ರೀತಿಯ ಬೆಳವಣಿಗೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ವಾಹಿನಿ ಯಾವ ರೀತಿಯ ಸುದ್ದಿಯನ್ನು ಪ್ರಕಟಿಸುತ್ತಿದೆ ಎಂಬುದೂ ಕೂಡ ನನಗೆ ತಿಳಿದಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನಾನು ನೀಡುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಪತ್ರಕರ್ತೆ ಪ್ರೇಮ ಶ್ರೀದೇವಿಯವರು ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರಸ್ತುತ ನಾನು ಯಾವುದೇ ರೀತಿಯ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಸುನಂದಾ ಸಾವು ಪ್ರಕರಣದಲ್ಲಿ ಪ್ರೇಮಾ ಶ್ರೀದೇವಿಯವರೂ ಕೂಡ ಸಾಕ್ಷಿಯಾಗಿದ್ದಾರೆ. ಸುನಂದಾ ಸಾವು ಕುರಿತಂತೆ ಈ ಹಿಂದೆ ಮಾತನಾಡಿದ್ದ ಪ್ರೇಮ ಶ್ರೀದೇವಿಯವರು, ಸುನಂದಾ ಅವರನ್ನು ಭೇಟಿಯಾಗಿದ್ದಾ ಅವರ ಮುಖದಲ್ಲಿ ಯಾವುದೇ ರೀತಿಯ ಕಲೆಗಳಿರಲಿಲ್ಲ. ಸಾಯುವ ದಿನದಂದು ನನ್ನೊಂದಿಗೆ ಸುನಂದಾ ಮಾತನಾಡಲು ಬಯಸಿದ್ದರು. 4 ಗಂಟೆ ಸುಮಾರಿಗೆ ನನ್ನ ಫೋನಿಗೆ ಸಂದೇಶವೊಂದನ್ನು ಕಳುಹಿಸಿದ್ದರು ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics