ದೇಶ

ಇವಿಎಂ ವಿವಾದ: ಕೇಜ್ರಿವಾಲ್ ಬೆಂಬಲಕ್ಕೆ ನಿಂತ ಲಾಲು ಪ್ರಸಾದ್ ಯಾದವ್

Lingaraj Badiger
ಪಾಟ್ನಾ: ವಿದ್ಯುನ್ಮಾನ ಮತಯಂತ್ರ(ಇವಿಎಂ)ಯನ್ನು ತಿರುಚಬಹುದು ಎಂಬ ರಾಜಕೀಯ ವಾದ ದಿನದಿಂದ ದಿನಕ್ಕೆ ಬಲವಾಗುತ್ತಿದ್ದು, ಇವಿಎಂ ಹ್ಯಾಕ್ ಮಾಡಬಹುದು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಾದವನ್ನು ಈಗ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬೆಂಬಲಿಸಿದ್ದಾರೆ.
ಇವಿಎಂ ತಿರುಚುವ ವಿಚಾರ ತುಂಬಾ ಗಂಭೀರ ವಿಷಯವಾಗಿದ್ದು, ಒಂದು ರಹಸ್ಯ ಕೋಡ್ ಸೇರಿಸುವ ಮೂಲಕ ಅದನ್ನು ಹ್ಯಾಕ್ ಮಾಡಬಹುದು ಎಂಬುದನ್ನು ಕೇಜ್ರಿವಾಲ್ ಅವರ ಶಾಸಕ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದಾರೆ.
ಇದೇ ವೇಳೆ ಆರ್ ಜೆಡಿ ರಾಷ್ಟ್ರೀಯ ವಕ್ತಾರ ಮನೋಜ್ ಜಾ ಅವರು ಇವಿಎಂ ವಿವಾದ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮೇ 12ರಂದು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ಲಾಲು ತಿಳಿಸಿದ್ದಾರೆ.
ನಿನ್ನೆ ದೆಹಲಿ ವಿಧಾನಸಭೆಯಲ್ಲಿ ಇವಿಎಂ ತಿರುಚುವುದು ಹೇಗೆ ಎಂಬುದುರ ಬಗ್ಗೆ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು.
SCROLL FOR NEXT