ದೇಶ

ಬಾಬರ್, ಅಕ್ಬರ್, ಔರಂಗಜೇಬ್ ದಾಳಿಕೋರರು: ಯೋಗಿ ಆದಿತ್ಯನಾಥ್

Srinivas Rao BV
ಲಖನೌ: ಬಾಬರ್, ಅಕ್ಬರ್, ಔರಂಗಜೇಬ್ ದಾಳಿಕೋರರಾಗಿದ್ದರು. ಯುವಜನತೆ ಮಹಾರಾಣಾ ಪ್ರತಾಪನಂಥವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. 
ಮಹಾರಾಣಾ ಪ್ರತಾಪ್ ರ 477 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಸತ್ಯವನ್ನು ಒಪ್ಪಿಕೊಂಡರೆ ದೇಶದ ಸಮಸ್ಯೆಗಳು ಕಣ್ಮರೆಯಾಗಲಿವೆ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. 
ಮಹಾರಾಣಾ ಪ್ರತಾಪ್, ಗುರು ಗೋವಿಂದ ಸಿಂಗ್, ಛತ್ರಪತಿ ಶಿವಾಜಿ ನಮಗೆ ಮಾದರಿಯಾಗಬೇಕು ನಾವು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು, ಇಂದಿನ ಯುವಕರು ಮಹಾರಾಣ ಪ್ರತಾಪರಿಂದ ಸ್ವಾಭಿಮಾನ ಹಾಗೂ ಸಾಮರ್ಥ್ಯಗಳನ್ನು ಕಲಿಯಬೇಕಿದೆ, ಬಾಬರ್, ಅಕ್ಬರ್, ಔರಂಗಜೇಬ್ ದಾಳಿಕೋರರಾಗಿದ್ದು, ಸತ್ಯವನ್ನು ಅರಿತಷ್ಟೂ ಶೀಘ್ರವಾಗಿ ದೇಶದ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಆದಿತ್ಯನಾಥ್ ಹೇಳಿದ್ದಾರೆ. 
ಯಾವ ಸಮುದಾಯಕ್ಕೆ ತನ್ನ ವೈಭವಯುತ ಇತಿಹಾಸವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವುದಿಲ್ಲವೋ, ತನ್ನ ಪ್ರದೇಶವನ್ನು ಕಾಪಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಯೋಗಿ ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 
SCROLL FOR NEXT