ಸಂಗ್ರಹ ಚಿತ್ರ 
ದೇಶ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕ್ ಪುಂಡಾಟ: ಶೆಲ್ ದಾಳಿಗೆ ಓರ್ವ ಮಹಿಳೆ ಬಲಿ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿ ಪಾಕಿಸ್ತಾನ ಸೈನಿಕರು ಮತ್ತೆ ತಮ್ಮ ಪುಂಡಾಟವನ್ನು ಮುಂದುವರೆಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಗೆ ಓರ್ವ ಮಹಿಳೆ ಬಲಿಯಾಗಿರುವ ಘಟನೆ ಗುರುವಾರ ನಡೆದಿದೆ...

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿ ಪಾಕಿಸ್ತಾನ ಸೈನಿಕರು ಮತ್ತೆ ತಮ್ಮ ಪುಂಡಾಟವನ್ನು ಮುಂದುವರೆಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಗೆ ಓರ್ವ ಮಹಿಳೆ ಬಲಿಯಾಗಿರುವ ಘಟನೆ ಗುರುವಾರ ನಡೆದಿದೆ. 
ನೌಶೆರಾ ಸೆಕ್ಟರ್'ನ ಲಾಮ್ ಬೆಲ್ಟ್ ಬಳಿಯಿರುವ ಗ್ರಾಮದ ಬಳಿ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸಿದ್ದು, ದಾಳಿಗೆ ಅಖ್ತರ್ ಬಿ (35) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಅಲ್ಲದೆ, ಆಕೆ ಪತಿ ಮೊಹಮ್ಮದ್ ಹನೀಫ್ (40) ಎಂಬುವವರಿಗೆ ಗಂಭೀರವಾದ ಗಾಯವಾಗಿದೆ ಎಂದು ತಿಳಿದುಬಂದಿದೆ. 
ಕಳೆದ ರಾತ್ರಿ 10.40ರ ಸುಮಾರಿಗೆ ನೌಶೆರಾದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಸಣ್ಣ ಹಾಗೂ ಆಟೋಮೆಟಿಕ್ ಶಸ್ತ್ರಾಸ್ತ್ರಗಳ ಮೂಲಕ ಭಾರತೀಯ ಸೇನೆ ಮೇಲೆ ದಾಳಿ ನಡೆಸಿತ್ತು ಎಂದು ರಕ್ಷಣಾ ವಕ್ತಾರ ಹೇಳಿದ್ದಾರೆ. 
ನಾಗರಿಕ ಪ್ರದೇಶಗಳ ಮೇಲೆ 82 ಎಂಎಂ ಮತ್ತು 120 ಎಂಎಂ ಶೆಲ್ ಗಳಿಂದ ಪಾಕಿಸ್ತಾನ ದಾಳಿ ನಡೆಸಿತ್ತು. ಈ ವೇಳೆ ಮಹಿಳೆಯೊಬ್ಬರು ಬಲಿಯಾಗಿದ್ದು, ಮತ್ತೋರ್ವ ವ್ಯಕ್ತಿಗೆ ಗಾಯಗಳಾಗಿವೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

2028ಕ್ಕೆ 75-80 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು, ಅಧಿಕಾರಕ್ಕೆ- ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ! ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬೆಂಗಳೂರು: ಪೊಲೀಸರ ಭದ್ರತೆ ನಡುವೆ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಅಕ್ರಮ ಮಹಿಳಾ ವಲಸಿಗರು ಪರಾರಿ!

ಬೆಂಗಳೂರು: ಮಾಜಿ ಉಪ ಮೇಯರ್ ಸೊಸೆಯ ಕಾರನ್ನು ತಡೆದು ಕಿರುಕುಳ, ಆಕೆಯ ಪತಿ ಮೇಲೂ ಹಲ್ಲೆ!

ಬೇಲ್ ಫಸ್ಟ್ ಲುಕ್ ರಿಲೀಸ್ : ಸಾಲ್ಟ್ ಅಂಡ್‌ ಪೆಪ್ಪರ್ ಲುಕ್ ಶಿವಣ್ಣ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ! Video

SCROLL FOR NEXT