ನವದೆಹಲಿ: ತ್ರಿವಳಿ ತಲಾಖ್ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ ನ್ಯಾಯಪೀಠದಲ್ಲಿ ಮಹಿಳಾ ನ್ಯಾಯಮೂರ್ತಿಗಳು ಇಲ್ಲದೇ ಇರುವುದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಲಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದಲ್ಲಿ ವಿವಿಧ ಧರ್ಮದ ನ್ಯಾಯಮೂರ್ತಿಗಳಿದ್ದಾರೆ. ಆದರೆ ಇದು ಧಾರ್ಮಿಕ ವಿಷಯವಲ್ಲ. ಮಹಿಳೆಯರ ಹಕ್ಕಿನ ವಿಷಯ ಹಾಗೂ ಮಾನವ ಹಕ್ಕುಗಳ ವಿಷಯವಾಗಿರುವುದರಿಂದ ಮಹಿಳಾ ನ್ಯಾಯಮೂರ್ತಿಯೊಬ್ಬರು ನ್ಯಾಯಪೀಠದಲ್ಲಿರಬೇಕಿತ್ತು ಎಂದು ಲಲಿತಾ ಕುಮಾರಮಂಗಲಂ ಅಭಿಪ್ರಾಯಪಟ್ಟಿದ್ದಾರೆ.
ನಾನು ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿಗಳ ಸಾಮರ್ಥ್ಯವನ್ನು ಪ್ರಶ್ನಿಸುತ್ತಿಲ್ಲ. ಆದರೆ ನ್ಯಾ.ಆರ್ ಭಾನುಮತಿ ಅವರು ಇರಬೇಕಿತ್ತು ಎಂದು ಲಲಿತಾ ಕುಮಾರಮಂಗಲಂ ಹೇಳಿದ್ದಾರೆ. ಮುಸ್ಲಿಮ್ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್ ವಿಷಯವನ್ನು ಕುರಾನ್ ನಲ್ಲಿ ಹೇಳಿಲ್ಲವೆಂದು ಮುಸ್ಲಿಮ್ ಮಹಿಳೆಯರೇ ಹೇಳುತ್ತಿದ್ದಾರೆ ಎಂದು ಲಲಿತಾ ಕುಮಾರ ಮಂಗಲಂ ಹೇಳಿದ್ದಾರೆ.