ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ನವದೆಹಲಿ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂದಿಗೂ ಇಂದಿರಾ ಗಾಂಧಿಯವರು ಅತ್ಯಂತ ಮೆಚ್ಚುಗೆ ಪ್ರಧಾನಿಯಾಗಿದ್ದಾರೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಭಾನುವಾರ ಹೇಳಿದ್ದಾರೆ.
ಇಂದಿರಾ ಗಾಂಧಿ ಆತ್ಮಕಥೆ ಇಂಡಿಯಾಸ್ ಇಂದಿರಾ ಪುಸ್ಕತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಗಂಡು ಮಾತನಾಡಿರುವ ಅವರು, 20ನೇ ಶತಮಾನದಿಂದಲೂ ಇಂದಿರಾ ಗಾಂಧಿಯವರು ಒಬ್ಬ ಪ್ರಭಾವಿ ಹಾಗೂ ಅತ್ಯಂತ ಜನಪ್ರಿಯ ಮಹಿಳೆಯರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಇಂದಿರಾ ಗಾಂಧಿ ಹತ್ಯೆಯಾದ 33 ವರ್ಷದ ಬಳಿಕವೂ ಇಂದಿರಾ ಅವರ ಕುರಿತು ಜನರು ಮಾತನಾಡುತ್ತಾರೆ. ಅವರ ಆಡಳಿತ, ಕಾರ್ಯವೈಖರಿ ಕುರಿತು ಅಭಿಪ್ರಾಯಗಳನ್ನು ಹೊಂದಿದ್ದು, ಸ್ವೀಕಾರಾರ್ಹ ಪ್ರಧಾನಿ ಎಂದು ಕರೆಯುತ್ತಿದ್ದಾರೆಂದು ಹೇಳಿದ್ದಾರೆ.
1977ರಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಆಗ ನಾನು ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅಂದು ನನ್ನ ಜೊತೆ ಮಾತನಾಡಿದ್ದ ಇಂದಿರಾ ಗಾಂಧಿಯವರು, ಸೋಲಿನಿಂದ ಕುಸಿಯಬಾರದು, ಇದು ಎದ್ದು ನಿಲ್ಲುವ ಸಮಯವೆಂದು ಹೇಳಿದ್ದರು. ಹಾಗೆಯೇ ಅವರು ಎದ್ದು ನಿಂತಿದ್ದರು ಎಂದು ತಿಳಿಸಿದರು.
ಇಂದಿರಾ ಗಾಂಧಿ ಧೈರ್ಯಕ್ಕೆ ಸಾಕ್ಷಿಯಾಗಿದ್ದ ಪಂಜಾಬ್ ನ ಸ್ವರ್ಣ ಮಂದಿರ ಗಲಭೆ ಹಾಗೂ ಆಪರೇಷನ್ ಬ್ಲೂ ಸ್ಟಾರ್ ಕುರಿತು ಇದೇ ವೇಳೆ ಮಾತನಾಡಿದ ಪ್ರಣಬ್ ಮುಖರ್ಜಿಯವರು, ಗಲಭೆ ಹಾಗೂ ಅಲ್ಲಿನ ಬೆಳವಣಿಗೆ ಕುರಿತು ಇಂದಿರಾ ಗಾಂಧಿಯವರಿಗೆ ಮೊದಲೇ ತಿಳಿದಿತ್ತು. ಈ ಎಲ್ಲಾ ಬೆಳವಣಿಗೆ ಕುರಿತು ನನ್ನ ಬಳಿ ಮಾತನಾಡಿದ್ದರು. ಆ ಕ್ಷಣಕ್ಕೆ ಅನಿವಾರ್ಯವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಆಧರೆ, ನಮ್ಮ ನಿರ್ಧಾರ ಮುಂದೊಂದು ದಿನ ಹಿಂತಿರುಗಿ ನೋಡಿದಾಗ ತಪ್ಪೆನಿಸಬಹುದು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಈ ಪುಸ್ತಕವನ್ನು ಬರೆದಿದ್ದು, ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಹಮೀದ್ ಅನ್ಸಾರಿ ಸೇರಿದಂದೆ ಇನ್ನಿತರೆ ನಾಯಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics