ದೇಶ

ಸುಪ್ರೀಂ ಕೋರ್ಟ್ ತಲಾಖ್ ನ್ನು ರದ್ದುಗೊಳಿಸಿದರೆ ಮುಸ್ಲಿಂ ವಿವಾಹಕ್ಕೆ ಹೊಸ ಕಾನೂನು ರಚನೆ: ಕೇಂದ್ರ ಸರ್ಕಾರ

Srinivas Rao BV
ನವದೆಹಲಿ: ಸುಪ್ರೀಂ ಕೋರ್ಟ್ ತಲಾಖ್ ನ್ನು ರದ್ದುಗೊಳಿಸಿದರೆ ಮುಸ್ಲಿಂ ವಿವಾಹ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ರಚನೆ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. 
ಸೋಮವಾರ(ಮೇ.15)ರಂದು ತ್ರಿವಳಿ ತಲಾಖ್ ಬಗೆಗಿನ ವಿಚಾರಣೆಯನ್ನು ಮುಂದುವರೆಸಿದ ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿಕೆ ನೀಡಿದ್ದು, ಮುಸ್ಲಿಮ್ ಸಮುದಾಯಲ್ಲಿನ ವಿವಾಹ ಹಾಗೂ ವಿಚ್ಛೇದನವನ್ನು ನಿಯಂತ್ರಿಸಲು ಕಾನೂನು ರೂಪಿಸುವುದಾಗಿ ತಿಳಿಸಿದೆ. 
ಒಂದು ವೇಳೆ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದರೆ ಮುಸ್ಲಿಮರು ವಿಚ್ಛೇದನ ಪಡೆಯುವುದಕ್ಕೆ ಏನು ಮಾಡಬೇಕು, ಪರ್ಯಾಯ ಮಾರ್ಗಗಳೇನು ಎಂದು ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರೋಹಟ್ಗಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದರೆ ಮುಸ್ಲಿಮರ ವಿವಾಹ ಹಾಗೂ ವಿಚ್ಛೇದನಕ್ಕೆ ಹೊಸ ಕಾನೂನು ಜಾರಿಗೆ ತರವುದಾಗಿ ಹೇಳಿದ್ದಾರೆ. 
SCROLL FOR NEXT