ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ಉಂಟಾದ ಬಿರುಗಾಳಿ, ಚಂಡಮಾರುತ ಹಾಗೂ ಸತತ ಮಳೆಯಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟು 100ಕ್ಕೂ ಅಧಿಕ ಮಂದಿ ಮನೆ ಮನೆ ಕಳೆದುಕೊಂಡಿದ್ದಾರೆ.
ನಿನ್ನೆ ಮುಂಜಾನೆ ಉಂಟಾದ ಸತತ ಮಳೆ, ಬಿರುಗಾಳಿಗೆ ನಾಮ್ಸೈ ಜಿಲ್ಲೆಯ ನ್ಯು ಮೊಹೊಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿರುಗಾಳಿ ಸುಮಾರು 90 ನಿಮಿಷಗಳ ಕಾಲ ಸುರಿದಿದ್ದು ಸುಮಾರು 180 ಮನೆಗಳು ನಾಶವಾಗಿವೆ. ದನ ಕರುಗಳ ದೊಡ್ಡಿಗಳು, ನೀರು, ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ.
ಅಲ್ಲಲ್ಲಿ ಮರಗಳು ಉರುಳಿ ಬಿದ್ದು ರಸ್ತೆಗಳಲ್ಲಿ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ರಕ್ಷಣೆಗೆ ಧಾವಿಸಿದ್ದಾರೆ.