ದೇಶ

ಕೇರಳ: ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆಯಲು ಆಗ್ರಹ, ಸಿಬಿಎಸ್ ಇ ಅಧ್ಯಕ್ಷರಿಗೆ ಮಾನವ ಹಕ್ಕು ಆಯೋಗ ನೊಟೀಸ್

Sumana Upadhyaya
ನವದೆಹಲಿ: ಕೇರಳದ ಕಣ್ಣೂರಿನಲ್ಲಿ ಮೇ 7ರಂದು ರಾಷ್ಟ್ರೀಯ ಅರ್ಹತೆ/ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಮೇಲೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ,ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ನೊಟೀಸ್ ಜಾರಿ ಮಾಡಿದೆ.
ಮಾನವ ಹಕ್ಕು ಆಯೋಗ ಸಿಬಿಎಸ್ಇಯ ಅಧ್ಯಕ್ಷರಿಗೆ ನೊಟೀಸ್ ಜಾರಿ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಹೇಳಿದೆ.
 ಮಾಜಿ ಶಾಸಕ ಜೋಸೆಫ್ ಎಂ. ಪುತುಸ್ಸೆರ್ರಿ ಅವರು ಸಲ್ಲಿಸಿದ ದೂರಿಗೆ ಸಂಬಂಧಪಟ್ಟಂತೆ ಮಾನವ ಹಕ್ಕು ಆಯೋಗ ನೊಟೀಸ್ ಜಾರಿ ಮಾಡಿದೆ. ಘಟನೆಯಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣ ಕಡೆಗಣಿಸಲಾಗಿದ್ದು ಅಭ್ಯರ್ಥಿಗಳ ಖಾಸಗಿತನವನ್ನು ಮುರಿಯಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸಿಬಿಎಸ್ ಇ ಕಟ್ಟುನಿಟ್ಟಿನ ಮಾರ್ಗಸೂಚಿ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ಅವಮಾನಿಸಲಾಗಿದೆ. ಕಳೆದ ಮೇ 7ರಂದು ರಾಷ್ಟ್ರೀಯ ಅರ್ಹತಾ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ ನೆಪದಲ್ಲಿ ಕೇರಳದ ಕಣ್ಣೂರಿನಲ್ಲಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ತೆಗೆಯಲು ಹೇಳಲಾಗಿತ್ತು.
SCROLL FOR NEXT