ಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿ
ಕೋಲ್ಕತಾ: ಮಸೀದಿಯ ಆಡಳಿತ ಮಂಡಳಿ ಆದೇಶವನ್ನು ಒಪ್ಪುವುದಿಲ್ಲ, ಹುದ್ದೆಯಿಂದ ನನ್ನನ್ನು ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿ ಹೇಳಿದ್ದಾರೆ.
ಕೋಲ್ಕತಾ ಟಿಪ್ಪು ಸುಲ್ತಾನ್ ಮಸೀದಿಯ ವಿವಾದಿತ ಮೌಲ್ವಿ ನೂರ್ ಉರ್ ರೆಹಮಾನ್ ಬರ್ಕಾತಿ ಅವರು ನೀಡಿದ್ದ ದೇಶ ವಿರೋಧಿ ಹೇಳಿಕೆ ಹಾಗೂ ಸ್ಥಾನಮಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪದ ಮೇರೆಗೆ ನಿನ್ನೆಯಷ್ಟೇ ಮಸೀದಿಯಿಂದ ವಜಾ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬರ್ಕಾತಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಮಸೀದಿಯ ಆಡಳಿತ ಮಂಡಳಿಯ ಆದೇಶವನ್ನು ನಾನು ಪಾಲಿಸಲ್ಲ. ನನ್ನನ್ನು ಹುದ್ದೆಯಿಂದ ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ. ಈ ಕುರಿತಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆ.