ದೇಶ

ಲಷ್ಕರ್ ಉಗ್ರ ಸಂಘಟನೆಯಿಂದ ಹಣ ಪಡೆದ ಆರೋಪ: ಪ್ರತ್ಯೇಕತಾವಾದಿ ಗಿಲಾನಿ ಮೇಲೆ ಎನ್ಐಎ ಕಣ್ಣು

Srinivas Rao BV
ನವದೆಹಲಿ: ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆಯಿಂದ ಹಣ ಪಡೆದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕಾಶ್ಮೀರ ಪ್ರತ್ಯೇಕತಾವಾದಿ ಗಿಲಾನಿ ವಿರುದ್ಧ ಪ್ರಕರಣ ದಾಖಲಿಸಿದೆ. 
ಈ ಬಗ್ಗೆ ಜಮ್ಮು-ಕಾಶ್ಮೀರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೇ.20 ರಂದು ಎನ್ಐಎ ತಂಡ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಹುರಿಯತ್ ಕಾನ್ಫರೆನ್ಸ್ ನ ನಾಯಕರಾದ ನಯೀಮ್ ಖಾನ್, ಜೆಕೆಎಲ್ಎಫ್ ನಾಯಕ ಫಾರೂಕ್ ಅಹ್ಮದ್ ದರ್ ಸೇರಿದಂತೆ ಹಲವು ಪ್ರತ್ಯೇಕತಾವಾದಿಗಳ ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಹುರಿಯತ್ ಕಾನ್ಫರೆನ್ಸ್ ಕಾಶ್ಮೀರದಲ್ಲಿ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದು, ಕಣಿವೆಯಲ್ಲಿ ಕಲ್ಲುತೂರಾಟಕ್ಕೆ ಹಣ ನೀಡುತ್ತಿದೆ, ಇದಕ್ಕೆ ಪಾಕಿಸ್ತಾನ ಹಣ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈಗ  ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆಯಿಂದ ಹಣ ಪಡೆದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕಾಶ್ಮೀರ ಪ್ರತ್ಯೇಕತಾವಾದಿ ಗಿಲಾನಿ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಮುಂದಾಗಿದೆ. 
SCROLL FOR NEXT