ದೇಶ

ಆಹಾರ ಪದ್ಧತಿ ಮೂಲಕ ಬಿಜೆಪಿ ಜನರನ್ನು ವಿಭಜಿಸುತ್ತಿದೆ: ಅಖಿಲೇಶ್ ಯಾದವ್

Manjula VN
ಲಖನೌ: ದೇಶದಲ್ಲಿ ಬಿಜೆಪಿ ದ್ವಿಮುಖ ಧೋರಣೆಯನ್ನು ಆನುಸರಿಸುತ್ತಿದ್ದು, ಆಹಾರ ಪದ್ಧತಿಗಳ ಮೂಲಕ ಜನರನ್ನು ವಿಭಜನೆ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಆಹಾರ ಪದ್ಧತಿ ಮೂಲಕ ಬಿಜೆಪಿ ಜನರನ್ನು ಇಬ್ಬಾಗ ಮಾಡುತ್ತಿದೆ. ಪ್ರತ್ಯೇಕ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ನಾಯಕರು ಆಹಾರ ಪದ್ಧತಿ ಕುರಿತಂತೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಗೋವಾ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಯಾವುದೇ ಪ್ರಶ್ನೆಗಳನ್ನು ಎತ್ತುವುದಿಲ್ಲ. ಏಕೆಂದರೆ, ಬಿಜೆಪಿಯವರು ಆಹಾರ ಪದ್ಧತಿ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ. 
ವಿದೇಶಿ ಗಣ್ಯರ ಆಹಾರ ಪದ್ಧತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಳಿದ್ದಾರೆಯೇ? ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿದೆ. 
ಸ್ವಚ್ಛತೆ ಕುರಿತಂತೆ ತಜ್ಞರಗಳೇ ಇದ್ದರು, ಯಾವುದೇ ರೀತಿಯ ಬೆಳವಣಿಗೆಗಳು ಕಂಡು ಬರುತ್ತಿಲ್ಲ. ಗೋರಕ್ಷಣೆ ಹೆಸರಿನಲ್ಲಿ ಬಿಜೆಪಿ ಮತಗಳನ್ನು ಕೇಳುತ್ತಿದೆ. ಆದರೆ, ಗೋರಕ್ಷಕರಿಂದ ಜನರನ್ನು ಯಾರು ರಕ್ಷಣೆ ಮಾಡುತ್ತಾರೆಂದು ಪ್ರಶ್ನಿಸಿದ್ದಾರೆ. 
SCROLL FOR NEXT