ದೇಶ

ರಜನಿಕಾಂತ್ ನಟರಾಗಿಯೇ ಉಳಿಯಬೇಕು; ರಾಜಕೀಯ ಅವರಿಗೆ ಸರಿ ಹೊಂದದು: ಸುಬ್ರಹ್ಮಣ್ಯನ್ ಸ್ವಾಮಿ

Sumana Upadhyaya
ನವದೆಹಲಿ: ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಲಿಗೆ ಅವಿದ್ಯಾವಂತ ಅಭ್ಯರ್ಥಿಗಳ ಅವಶ್ಯಕತೆಯಿಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಸೇರುವ ಸಾಧ್ಯತೆಗೆ ಸಂಬಂಧಪಟ್ಟಂತೆ ಅವರು ಈ ರೀತಿ ನುಡಿದಿದ್ದಾರೆ.
ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಜನಿಕಾಂತ್ ಅವರು ಯೋಗ್ಯರಾಗುವುದಿಲ್ಲ. ಅವರಿಗೆ ಸಂವಿಧಾನ, ಮೂಲಭೂತ ಹಕ್ಕುಗಳು ಇತ್ಯಾದಿ ವಿಷಯಗಳ ಕುರಿತು ಆಲೋಚನೆಗಳಿಲ್ಲ. ಅವರು ಸಂಭಾಷಣೆಗಳನ್ನು ಚೆನ್ನಾಗಿ ಒಪ್ಪಿಸಿ ಮನರಂಜನೆ ನೀಡಲು ಸಾಧ್ಯವಾಗುವುದರಿಂದ ಸಿನಿಮಾಕ್ಕೆ ಸೀಮಿತವಾಗುವುದು ಸೂಕ್ತ ಎಂದು ಹೇಳಿದರು.
ಸಿನಿಮಾ ಸ್ಟಾರ್ ಗಳು ರಾಜಕೀಯ ಪ್ರವೇಶಿಸುವುದನ್ನು ಕೂಡ ವಿರೋಧಿಸುವ ಸುಬ್ರಹ್ಮಣ್ಯನ್ ಸ್ವಾಮಿ, ಈ ಹಿಂದೆ ರಾಜಕೀಯ ಸೇರಿದ ಸಿನಿಮಾ ಸ್ಟಾರ್ ಗಳಿಂದಾಗಿ ರಾಜ್ಯದ ಪ್ರಗತಿ ಕುಂಠಿತಗೊಂಡಿದೆ ಎಂದರು.
ಸಿನಿಮಾ ನಟ, ನಟಿಯರು ರಾಜಕೀಯಕ್ಕೆ ಸೇರಿದರೆ ಇಡೀ ವ್ಯವಸ್ಥೆ ನಾಶವಾಗಿ ಪ್ರಗತಿ ಕುಂಠಿತಗೊಳ್ಳುತ್ತದೆ.  ಕಾಮರಾಜ್ ಅವರು ರಾಜಕೀಯಕ್ಕೆ ಸೇರಿ ತಳಹದಿಯನ್ನೇ ಹಾಳು ಮಾಡಿದರು ಎಂದರು. 
ರಜನಿಕಾಂತ್ ಅವರು ಯಾವುದಾದರೊಂದು ಪಕ್ಷಕ್ಕೆ ಸೇರುತ್ತಾರೆ ಎಂಬ ಮಾಧ್ಯಮ ವರದಿಯನ್ನು ಸುಬ್ರಹ್ಮಣ್ಯ ಸ್ವಾಮಿ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದರು.
SCROLL FOR NEXT