ಜೀಪ್ ಮುಂಭಾಗಕ್ಕೆ ಯುವಕನನ್ನು ಕಟ್ಟಿದ್ದ ಅಧಿಕಾರಿ 
ದೇಶ

ಜೀಪ್ ಮುಂಭಾಗಕ್ಕೆ ಕಾಶ್ಮೀರಿ ಯುವಕನನ್ನು ಕಟ್ಟಿದ್ದ ಅಧಿಕಾರಿಗೆ ಸೇನಾ ಗೌರವ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರಿಂದ ರಕ್ಷಣೆ ಪಡೆಯುವ ಸಲುವಾಗಿ ಜೀಪ್​ನ ಮುಂಭಾಗಕ್ಕೆ ಕಾಶ್ಮೀರಿ ಯುವಕನನ್ನು ಕಟ್ಟಿದ್ದ ಮೇಜರ್ ...

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರಿಂದ ರಕ್ಷಣೆ ಪಡೆಯುವ ಸಲುವಾಗಿ ಜೀಪ್​ನ ಮುಂಭಾಗಕ್ಕೆ ಕಾಶ್ಮೀರಿ ಯುವಕನನ್ನು ಕಟ್ಟಿದ್ದ ಮೇಜರ್ ಲೀತುಲ್ ಗೊಗೋಯ್ ಅವರಿಗೆ ಸೇನಾ ಮುಖ್ಯಸ್ಥರು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.
ಪ್ರತಿಭಟನಾ ನಿರತರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೇಜರ್ ಗೊಗಯ್ ಅವರು ತೆಗೆದುಕೊಂಡ ತಕ್ಷಣದ ನಿರ್ಧಾರವನ್ನು ಪ್ರಶಂಸಿಸಿ ಸೇನಾ ಮುಖ್ಯಸ್ಥರು ಪ್ರಶಂಸಾ ಪತ್ರವನ್ನು ನೀಡಿದ್ದಾರೆ.
ಕಳೆದ ವಾರ ಜನರಲ್ ಬಿಪಿನ್ ರಾವತ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೇಜರ್ ಗೊಗೋಯ್ ಅವರಿಗೆ ಪ್ರಶಂಸಾ ಪತ್ರ ನೀಡಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಏಪ್ರಿಲ್ 9 ರಂದು ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಮತದಾನದ ದಿನ ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಮೇ. ಗೊಗೋಯ್ ಮತ್ತು ಅವರ ತಂಡ ಕಲ್ಲು ತೂರಾಟ ನಡೆಸುತ್ತಿದ್ದವರಿಂದ ರಕ್ಷಣೆ ಪಡೆಯುವ ಸಲುವಾಗಿ ಕಾಶ್ಮೀರಿ ಯುವಕನೊಬ್ಬನನ್ನು ಜೀಪ್ ಮುಂಭಾಗಕ್ಕೆ ಕಟ್ಟಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಆ ನಂತರ ಸೇನೆಯ ಕ್ರಮವನ್ನು ಹಲವರು ಟೀಕಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ

ಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!