ದೇಶ

ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: ನಿಲುವು ಬದಲಾವಣೆ ಮಾಡೋದಿಲ್ಲ ಎಂದ ಚೀನಾ

Srinivas Rao BV
ಬೀಜಿಂಗ್: ಮುಂದಿನ ತಿಂಗಳು ಎನ್ಎಸ್ ಜಿ ಸಭೆ ಸೇರಲಿದ್ದು, ಕಳೆದ ವರ್ಷದಂತೆಯೇ ಚೀನಾ ಭಾರತದ ಸದಸ್ಯತ್ವಕ್ಕೆ ಅಡ್ಡಗಾಲು ಹಾಕಲಿದೆ ಎಂಬ ನಿರೀಕ್ಷೆ ನಿಜವಾಗಿದೆ. 
ಭಾರತದ ಎನ್ಎಸ್ ಜಿ ಸದಸ್ಯತ್ವದ ಬಗ್ಗೆ ಸಭೆಗೂ ಮುನ್ನವೇ ಪ್ರತಿಕ್ರಿಯೆ ನೀಡಿರುವ ಚೀನಾ, ಭಾರತದ ಸದಸ್ಯತ್ವಕ್ಕೆ ಬೆಂಬಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. 
ಎನ್ ಪಿಟಿಗೆ ಸಹಿ ಹಾಕದ ರಾಷ್ಟ್ರಗಳಿಗೆ ಎಸ್ಎಸ್ ಜಿ ಸದಸ್ಯತ್ವ ನೀಡಬಾರದು ಎಂಬ ನಿಲುವಿಗೆ ಚೀನಾ ಈಗಲೂ ಬದ್ಧವಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಎನ್ಎಸ್ ಜಿ ಸಭೆಯಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಉತ್ತರಿಸಿದ್ದಾರೆ. 
ಇನ್ನು ಭಾರತ ಎನ್ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಮತ್ತೊಂದು ಸುತ್ತಿನ ರಾಜತಾಂತ್ರಿಕ ಪ್ರಯತ್ನ ನಡೆಸುತ್ತಿದ್ದು, ಎಸ್ಎಸ್ ಜಿಗೆ ಸಂಬಂಧಿಸಿದ ಎಲ್ಲಾ ರಾಷ್ಟ್ರಗಳೊಂದಿಗೂ ಮಾತುಕತೆ ನಡೆಸುತ್ತಿದೆ. 
SCROLL FOR NEXT