ಬದೌನ್: ಗಂಡನನ್ನು ಮರಕ್ಕೆ ಕಟ್ಟಿಹಾಕಿ ಆತನ ಕಣ್ಣ ಮುಂದೆಯೇ ಮೂವರು ಕಾಮುಕರು 27 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಸಹಸ್ ವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಸಂಜೆ ಮಹಿಳೆ ತನ್ನ ಪತಿಯೊಂದಿಗೆ ಆರೋಗ್ಯ ಕೇಂದ್ರದಿಂದ ವಾಪಸಾಗುವಾಗ ಈ ದುರಂತ ಸಂಭವಿಸಿದೆ.
ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ತಡೆದು ನಿಲ್ಲಿಸಿ, ಗಂಡನನ್ನು ಮರಕ್ಕೆ ಕಟ್ಟಿ, ನಂತರ ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶೆರೋಜ್ ಸಿಂಗ್ ಹೇಳಿದ್ದಾರೆ.
ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಮಹಿಳೆಯನ್ನು ವೈದ್ಯಕೀಯ ಪರಿಕ್ಷೆಗೊಳಪಡಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.