ಸಾಂದರ್ಭಿಕ ಚಿತ್ರ 
ದೇಶ

ಇವಿಎಂ ಚಾಲೆಂಜ್ ಸ್ವೀಕರಿಸಿದ ಏಕೈಕ ಪಕ್ಷ ಎನ್ ಸಿಪಿ, ಮುಂದೆ ಬರದ ಇತರೆ ಪಕ್ಷಗಳು

ವಿದ್ಯುನ್ಮಾನ ಮತ ಯಂತ್ರ (ಇವಿಎಂ)ವನ್ನು ತಿರುಚುಬಹುದು ಎಂಬ ಆರೋಪವನ್ನು ಸಾಬೀತುಪಡಿಸುವಂತೆ ಕೇಂದ್ರ ಚುನಾವಣಾ....

ನವದೆಹಲಿ: ವಿದ್ಯುನ್ಮಾನ ಮತ ಯಂತ್ರ (ಇವಿಎಂ)ವನ್ನು ತಿರುಚುಬಹುದು ಎಂಬ ಆರೋಪವನ್ನು ಸಾಬೀತುಪಡಿಸುವಂತೆ ಕೇಂದ್ರ ಚುನಾವಣಾ ಆಯೋಗ ನೀಡಿದ್ದ ಸವಾಲನ್ನು ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರ ಎನ್ ಸಿಪಿ ಮಾತ್ರ ಸ್ವೀಕರಿಸಿದ್ದು, ಇತರೆ ಯಾವುದೇ ಪಕ್ಷಗಳು ಸವಾಲು ಸ್ವೀಕರಿಸಲು ಮುಂದೆ ಬಂದಿಲ್ಲ ಎಂದು ಶುಕ್ರವಾರ ಆಯೋಗದ ವಕ್ತಾರರು ತಿಳಿಸಿದ್ದಾರೆ.
ಇವಿಎಂ ಹ್ಯಾಕ್ ಮಾಡಿ ತೋರಿಸುವಂತೆ ಚುನಾವಣಾ ಆಯೋಗ ಆಹ್ವಾನ ನೀಡಿತ್ತು. ಇವಿಎಂ ಹ್ಯಾಕಥಾನ್‍ನಲ್ಲಿ ಭಾಗವಹಿಸಲು ಇಂದು ಸಂಜೆ 5 ಗಂಟೆಯವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಎನ್ ಸಿಪಿ ಮಾತ್ರ ಹ್ಯಾಕಥಾನ್‍ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಜೂನ್‌ 3ರಿಂದ 5 ದಿನಗಳ ವರೆಗೆ ನಡೆಯುವ ಇವಿಎಂ ಹ್ಯಾಕಥಾನ್ ಚಾಲೆಂಜ್ ನಲ್ಲಿ ಭಾವಹಿಸುವಂತೆ ಚುನಾವಣೆ ಆಯೋಗ ರಾಜಕೀಯ ಪಕ್ಷಗಳಿಗೆ ಬರೆದಿದ್ದ ಪತ್ರಕ್ಕೆ ಒಟ್ಟು ರಾಜಕೀಯ ಪಕ್ಷಗಳು ಪ್ರತಿಕ್ರಿಯಿಸಿವೆ. ಆದರೆ ಎನ್ ಸಿಪಿ ಮಾತ್ರ ಚಾಲೆಂಜ್ ಸ್ವೀಕರಿಸಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ, ಬಿಎಸ್ಪಿ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿದ್ದವು. ಹೀಗಾಗಿ ಜೂನ್‌ 3ರಿಂದ ಚುನಾವಣಾ ಆಯೋಗಕ್ಕೆ ಬಂದು ನಿಮ್ಮ ಆರೋಪವನ್ನು ಸಾಬೀತುಪಡಿಸಬಹುದು ಮತ್ತು ಆರೋಪಕ್ಕೆ ಪೂರಕವಾದ ಪುರಾವೆಯನ್ನೂ ಪಕ್ಷಗಳು ಆಯೋಗಕ್ಕೆ ಸಲ್ಲಿಸಬಹುದು ಎಂದು ಹೇಳಿತ್ತು.
ಆರೋಪ ಮಾಡುತ್ತಿರುವ ಪಕ್ಷಗಳು ಜೂನ್‌ 3ರಿಂದ ತಮ್ಮ ಆರೋಪ ಸಾಬೀತು ಮಾಡಲು ಅವಕಾಶ ಕಲ್ಪಿಸಿದ್ದು, 'ಇವಿಎಂ ಹ್ಯಾಕಥಾನ್' ನಲ್ಲಿ ಭಾಗವಹಿಸಿ ಎಂದು ರಾಜಕೀಯ ಪಕ್ಷಗಳಿಗೆ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಆಹ್ವಾನ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video