ದೇಶ

ಕಾಶ್ಮೀರದಲ್ಲಿನ ಅನಿಶ್ಚಿತತೆ ಸದ್ಯದಲ್ಲಿಯೇ ಕೊನೆಯಾಗಲಿದೆ: ಅಮಿತ್ ಶಾ

Sumana Upadhyaya
ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಇರುವ ಅನಿಶ್ಚಿತತೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸದ್ಯದಲ್ಲಿಯೇ ನಿಯಂತ್ರಣಕ್ಕೆ ತರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ವರ್ಷಗಳ ಆಡಳಿತಾವಧಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೇಕಿಂಗ್ ಆಫ್ ಡೆವೆಲಪ್ ಡ್ ಇಂಡಿಯಾ(M.O.D.I. (Making of Developed India)ದ ಮೊದಲ ದಿನದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಶ್ಮೀರ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ಮೋದಿ ಮತ್ತು ಕಾಶ್ಮೀರ ಸರ್ಕಾರ ಏಕೆ ವಿಫಲರಾಗಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಮೂರು ತಿಂಗಳುಗಳ ಅಭಿವೃದ್ಧಿಯಿಂದ ಸರ್ಕಾರದ ಯಶಸ್ಸು ಮತ್ತು ವೈಫಲ್ಯವನ್ನು ಅಳೆಯಲು  ಸಾಧ್ಯವಿಲ್ಲ ಎಂದು ಅವರು ಹೇಳಿದರು.
1989ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಆರಂಭಗೊಂಡ ನಂತರ ಅಲ್ಲಿ 3ರಿಂದ 6 ತಿಂಗಳು ಹಿಂಸಾಚಾರ ಇರುವ ವಾತಾವರಣ ಕಾಣುತ್ತೇವೆ. ಕಾಶ್ಮೀರ ಹಿಂಸೆಯನ್ನು ಮೋದಿ ನೇತೃತ್ವದ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
SCROLL FOR NEXT