ಉಜ್ಮಾ ಅಹ್ಮದ್-ವೀರೇಂದ್ರ ಸೆಹ್ವಾಗ 
ದೇಶ

ಅತ್ಯಂತ ಅದ್ಭುತ ದೇಶಕ್ಕೆ ಸ್ವಾಗತ: ಉಜ್ಮಾಗೆ ಸೆಹ್ವಾಗ್ ಟ್ವೀಟ್

ಗನ್ ಪಾಯಿಂಟ್ ನಡಿ ಪಾಕಿಸ್ತಾನದ ಯುವಕನಿಂದ ಬಲವಂತವಾಗಿ ಮದುವೆಯಾಗಿ ಚಿತ್ರಹಿಂಸೆ ಅನುಭವಿಸಿ ಕೊನೆಗೂ ಅಲ್ಲಿನ ಕಾನೂನು ಸಮರ ಗೆದ್ದು ಭಾರತಕ್ಕೆ...

ಗನ್ ಪಾಯಿಂಟ್ ನಡಿ ಪಾಕಿಸ್ತಾನದ ಯುವಕನಿಂದ ಬಲವಂತವಾಗಿ ಮದುವೆಯಾಗಿ ಚಿತ್ರಹಿಂಸೆ ಅನುಭವಿಸಿ ಕೊನೆಗೂ ಅಲ್ಲಿನ ಕಾನೂನು ಸಮರ ಗೆದ್ದು ಭಾರತಕ್ಕೆ ಹಿಂದಿರುಗಿರುವ ಉಜ್ಮಾ ಅಹಮದ್ ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶುಭ ಕೋರಿದ್ದಾರೆ. 
ಭಾರತದ ಮಣ್ಣಿನಲ್ಲಿ ಕಾಲಿಡುತ್ತಿದ್ದಂತೆ ಉಜ್ಮಾ ಅವರು ಭೂತಾಯಿಗೆ ನಮಿಸಿದರು. ನನಗೆ ಮರುಜನ್ಮ ಸಿಕ್ಕಿದೆ. ಈ ನೆಲದಲ್ಲಿ ನಾನು ಸ್ವಾತಂತ್ಯದ ಸ್ವಚ್ಛ ಗಾಳಿಯನ್ನು ಉಸಿರಾಡುತ್ತಿದ್ದೇನೆ. ಭಾರತದಂತಾ ದೇಶವನ್ನು ಇಡೀ ಪ್ರಪಂಚದಲ್ಲೇ ನಾನು ಎಲ್ಲೂ ಕಂಡಿಲ್ಲ ಎಂದು ಹೇಳಿದ್ದರು. 
ಇದಕ್ಕೆ ಟ್ವೀಟ್ ಮಾಡಿರುವ ವೀರೇಂದ್ರ ಸೆಹ್ವಾಗ್, ಭಾರತದಂತಾ ಸುರಕ್ಷಿತ ದೇಶ ಬೇರೆಲ್ಲೂ ಇಲ್ಲ. ಈ ಮಣ್ಣಿನ ಸಾರವೇ ಬೇರೆ. ಶುಭಾಶಯ, ಮರಳಿ ಅತ್ಯಂತ ಅದ್ಭುತ ದೇಶಕ್ಕೆ ಬಂದಿರುವುದಕ್ಕೆ ಸ್ವಾಗತ ಎಂದು ಟ್ವೀಟಿಸಿದ್ದರು. 
ಫೇಸ್ ಬುಕ್ ನಲ್ಲಿ ಪರಿಚಿತನಾಗಿದ್ದ ಪಾಕ್ ಮೂಲದ ತಾಹಿರ್ ಜತೆಗೆ ಉಜ್ಮಾಗೆ ಪ್ರೇಮಾಂಕುರವಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ನೋಡಿಕೊಂಡು ಬರಲು ಉಜ್ಮಾ ಪಾಕಿಸ್ತಾನಕ್ಕೆ ತೆರಳಿದ್ದಳು. ಬಳಿಕ ತಾಹಿರ್ ಬಲವಂತಾಗಿ ಉಜ್ಮಾನನ್ನು ಮದುವೆಯಾಗಿದ್ದ. ನಂತರ ಉಜ್ಮಾ ಅಲ್ಲಿನ ಕಾನೂನು ಸಮರದಲ್ಲಿ ಗೆದ್ದಿದ್ದಳು. ಇಸ್ಲಮಾಬಾದ್ ಹೈಕೋರ್ಟ್ ಉಜ್ಮಾ ಭಾರತಕ್ಕೆ ಮರಳಲು ಸೂಚಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್