ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸರಣಿ ಆರೋಪ ಮಾಡುತ್ತಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಶನಿವಾರ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ಹವಾಲ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಕಪಿಲ್ ಮಿಶ್ರಾ, ಈಗ 300 ಕೋಟಿ ರುಪಾಯಿ ಔಷಧಿ ಹಗರಣ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಮೂರು ಹಗರಣಗಳು ನಡೆದಿರುವುದಾಗಿ ಆರೋಪಿಸಿದ್ದಾರೆ.
ಆರೋಗ್ಯ ಕ್ಷೇತ್ರದ ಮೂರು ದೊಡ್ಡ ಹಗರಣಗಳಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಭಾಗಿಯಾಗಿದೆ. 300 ಕೋಟಿ ರುಪಾಯಿ ಔಷಧಿ ಖರೀದಿ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಭಾಗಿಯಾಗಿದ್ದಾರೆ ಎಂದು ಕಪಿಲ್ ಮಿಶ್ರಾ ಗಂಭೀರ ಆರೋಪ ಮಾಡಿದ್ದಾರೆ.
ಸತ್ಯೇಂದ್ರ ಜೈನ್ ಅವರು ಆಸ್ಪತ್ರೆಗಳು ನೇರವಾಗಿ ಔಷಧಿ ಖರೀಸಲು ಅವಕಾಶ ನೀಡಿಲ್ಲ. ಬದಲಾಗಿ ಕೇಂದ್ರ ಸಂಗ್ರಹಣೆ ಪ್ರಾಧಿಕಾರದಿಂದ ಖರೀದಿಸಲು ಅವಕಾಶ ನೀಡಿದ್ದಾರೆ. ಸರ್ಕಾರ ಆರು ತಿಂಗಳ ಮುಂಗಡವಾಗಿಯೇ ಕೋಟ್ಯಾಂತರ ರುಪಾಯಿ ಮೌಲ್ಯದ ಔಷಧಿಯನ್ನು ಖರೀದಿಸಿ ಅದನ್ನು ಮೂರು ದೊಡ್ಡ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಆದರೆ ಅದು ಸರಿಯಾಗಿ ಬಳಕೆಯಾಗದೆ ವ್ಯರ್ಥವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಆರೋಗ್ಯ ಇಲಾಖೆಗೆ ನೀಡಲಾದ ಅನುದಾನದಲ್ಲಿ ಮತ್ತು 100 ಆಂಬುಲೆನ್ಸ್ ಗಳ ಖರೀದಿಯಲ್ಲೂ ಹಗರಣ ನಡೆದಿದೆ ಎಂದು ಉಚ್ಚಾಟಿತ ಆಪ್ ನಾಯಕ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics