ಸಂಗ್ರಹ ಚಿತ್ರ 
ದೇಶ

41.7 ಮಿಲಿಯನ್ ಗೇರಿದ ಫಾಲೋವರ್ಸ್ ಗಳ ಸಂಖ್ಯೆ; ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿಗೆ ಅಗ್ರ ಸ್ಥಾನ

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರ ಸ್ಥಾನಕ್ಕೇರಿದ್ದು, ಒಟ್ಟು 41.7 ಮಿಲಿಯನ್ ಫೇಸ್ ಬುಕ್ ಫಾಲೋವರ್ಸ್ ಗಳನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.

ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರ ಸ್ಥಾನಕ್ಕೇರಿದ್ದು, ಒಟ್ಟು 41.7  ಮಿಲಿಯನ್ ಫೇಸ್ ಬುಕ್ ಫಾಲೋವರ್ಸ್ ಗಳನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದ್ದು, ಸಂಸ್ಥೆ ನೀಡಿರುವ ದತ್ತಾಂಶದ ಅನ್ವಯ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೂಡ ಹಿಂದಿಕ್ಕಿದ್ದಾರೆ. ಈ ಹಿಂದೆ ಅಗ್ರ ಸ್ಥಾನದಲ್ಲಿದ್ದ ಟ್ರಂಪ್  2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಟ್ರಂಪ್ ಒಟ್ಟು 19.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇನ್ನು ಮತ್ತೊಂದು ಅಚ್ಚರಿಯ ವಿಷಯವೆಂದರೆ 3ನೇ ಸ್ಥಾನದಲ್ಲಿ ಮತ್ತೆ ಪ್ರಧಾನಿ ಮೋದಿ ಅವರ ಕಚೇರಿ ಇದ್ದು, ಪ್ರಧಾನಿ ಮೋದಿ  ಅವರ ಕಚೇರಿಯನ್ನು 13.1 ಮಿಲಿಯನ್ ಫೇಸ್ ಬುಕ್ ಖಾತೆದಾರರು ಫಾಲೋ ಮಾಡುತ್ತಿದ್ದಾರೆ.

ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಾದ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಪಚ್ಛ ಭಾರತ ಅಭಿಯಾನ ಯೋಜನೆಗಳು ಫೇಸ್ ಬುಕ್ ನಲ್ಲಿ ಹೆಚ್ಚು ಚರ್ಚೆಗೊಳಗಾದ ವಿಚಾರಗಳಾಗಿವೆ  ಎಂದು ಫೇಸ್ ಬುಕ್ ಸಂಸ್ಥೆ ತಿಳಿಸಿದೆ.

2014ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ನರೇಂದ್ರ ಮೋದಿ ಅವರು ಫೇಸ್ ಬುಕ್ ನಲ್ಲಿ ಕೇವಲ 14 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದರು. ಇದೀಗ ಪ್ರಧಾನಿ ಮೋದಿ ನೇತೃತ್ವದ  ಕೇಂದ್ರ ಸರ್ಕಾರ 3 ವರ್ಷ ಪೂರ್ತಿ ಮಾಡಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಧಾನಿ ಮೋದಿ ಫೇಸ್ ಬುಕ್ ಪೇಜ್ ಫಾಲೋವರ್ಸ್ ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!