ದೇಶ

ಪ್ರವೇಶ ಪತ್ರದಲ್ಲಿ ಅಸ್ಪಷ್ಟ ಫೋಟೋವೆ?: ಆಧಾರ್ ಕಾರ್ಡಿನಂತಹ ಗುರುತು ಚೀಟಿ ತನ್ನಿ

Sumana Upadhyaya
ನವದೆಹಲಿ: ಜೂನ್ 18ರಂದು ನಡೆಯಲಿರುವ ಯುಪಿಎಸ್ ಸಿ(ಕೇಂದ್ರ ಲೋಕಸೇವಾ ಆಯೋಗ) ಪ್ರಾಥಮಿಕ ಹಂತದ ಪರೀಕ್ಷೆಗೆ ತಮ್ಮ ಪ್ರವೇಶ ಪತ್ರದಲ್ಲಿ ಫೋಟೋ ಸರಿಯಾಗಿ ಕಾಣಿಸದಿದ್ದರೆ ಅಥವಾ ಅಸ್ಪಷ್ಟವಾಗಿದ್ದರೆ ಆಧಾರ್ ಕಾರ್ಡ್ ಅಥವಾ ಬೇರೆ ಗುರುತು ಚೀಟಿ ಪ್ರತಿಯನ್ನು ತರಬೇಕೆಂದು ನಿಯಮ ರೂಪಿಸಲಾಗಿದೆ.
ಪರೀಕ್ಷಾಕಾಂಕ್ಷಿಗಳಿಗೆ ಹೊರಡಿಸಿದ ಸೂಚನೆಯಂತೆ ಇ-ಪ್ರವೇಶ ಪತ್ರದಲ್ಲಿ ಕಡಿಮೆ ಗುಣಮಟ್ಟದ ಭಾವಚಿತ್ರವಿದ್ದರೆ ಅಥವಾ ಫೋಟೋ ಸ್ಪಷ್ಟವಾಗಿ ಕಾಣಿಸದಿದ್ದರೆ ಗುರುತು ಚೀಟಿಗಾಗಿ ಆಧಾರ್ ಕಾರ್ಡು, ಚಾಲನಾ ಪರವಾನಗಿ, ಪಾಸ್ ಪೋರ್ಟ್ ಅಥವಾ ಮತದಾನ ಗುರುತು ಪತ್ರವನ್ನು ಎರಡು ಪಾಸ್ ಪೋರ್ಟ್ ಸೈಜ್ ಫೋಟೋದೊಂದಿದೆ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಬೇಕೆಂದು ಸೂಚಿಸಲಾಗಿದೆ. 
ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಯುಪಿಎಸ್ಸಿಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡಿನಲ್ಲಿ 12 ಸಂಖ್ಯೆ ವಿಶಿಷ್ಟ ಗುರುತು ಸಂಖ್ಯೆಗಳಿದ್ದು ಇದು ಅಭ್ಯರ್ಥಿಯ ಗುರುತು ಮತ್ತು ವಾಸಸ್ಥಳವನ್ನು ಸಾಕ್ಷಿಯನ್ನಾಗಿ ಪರಿಗಣಿಸುತ್ತದೆ.
ಪರೀಕ್ಷೆ ನಡೆಯುವ ಕೊಠಡಿಯೊಳಗೆ ಮೊಬೈಲ್ ಫೋನ್, ಕಾಲ್ಕ್ಯುಲೇಟರ್, ಐಟಿ ಗ್ಯಾಜೆಟ್ಸ್ ಮತ್ತು ಇತರ ಸಂವಹನ ಸಾಧನಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ. ಅಭ್ಯರ್ಥಿಗಳು ತೆಗೆದುಕೊಂಡು ಹೋಗಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.
SCROLL FOR NEXT