ಇಸೀಸ್ ಉಗ್ರ 
ದೇಶ

ಇಸೀಸ್ ಉಗ್ರನನ್ನು ಫೋನ್ ಮೂಲಕ ವಿವಾಹವಾದ ಉತ್ತರ ಪ್ರದೇಶದ ಯುವತಿ!

ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಉಗ್ರ ಅಮ್ಜಾದ್ ಖಾನ್ ಅಲಿಯಾಸ್ ಆಯನ್ ಖಾನ್ ಸಲಾಫಿಯನ್ನು ಉತ್ತರ ಪ್ರದೇಶದಲ 24 ವರ್ಷದ ವೈದ್ಯಕೀಯ...

ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಉಗ್ರ ಅಮ್ಜಾದ್ ಖಾನ್ ಅಲಿಯಾಸ್ ಆಯನ್ ಖಾನ್ ಸಲಾಫಿಯನ್ನು ಉತ್ತರ ಪ್ರದೇಶದಲ 24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಫೋನ್ ಮೂಲಕ ವಿವಾಹವಾಗಿದ್ದಾಳೆ. 
ಆಮ್ಜಾದ್ ನ ಉಗ್ರ ಸಂಘಟನೆ ಚಟುವಟಿಕೆಗಳು ಹಾಗೂ ಇಸ್ಲಾಮ್ ಬಗ್ಗೆ ಆತ ಹೊಂದಿದ್ದ ಜ್ಞಾನಕ್ಕೆ ಮಾರುಹೋಗಿದ್ದ ಅಜಮ್ ಘರ್ ನ ವೈದ್ಯಕೀಯ ವಿದ್ಯಾರ್ಥಿನಿ ಉಗ್ರ ಅಮ್ಜಾದ್ ಖಾನ್(37) ನೊಂದಿಗೆ ಕಳೆದ ವರ್ಷ ಮೇ ತಿಂಗಳಲ್ಲಿ ಫೋನ್ ಮೂಲಕವೇ ವಿವಾಹವಾಗಿದ್ದಾಳೆ. 
ಅಮ್ಜಾದ್ ಖಾನ್ ರಾಜಸ್ಥಾನ ಚುರು ನ ನಿವಾಸಿಯಾಗಿದ್ದು, ಜುನದ್-ಉಲ್-ಖಿಲಾಫಫಿಲ್-ಹಿಂದ್ (ಜೆಕೆಹೆಚ್) ಎಂಬ ಇಸೀಸ್ ಉಗ್ರ ಸಂಘಟನೆಯ ಭಾಗವಾಗಿರುವ ಉಗ್ರ ಸಂಘಟನೆಗೆ ಭಾರತದ ಯುವಕರನ್ನು ಸೇರಿಸುತ್ತಿದ್ದ. ಜೆಕೆಹೆಚ್ ಗೆ ಶಫಿ ಅರ್ಮಾರ್ ಎಂಬ ವ್ಯಕ್ತಿ ಮುಖ್ಯಸ್ಥನಾಗಿದ್ದು, 2015-16 ರಲ್ಲಿ ಪ್ರಾರಂಭವಾದ ಸಂಘಟನೆಯ 30 ಸದಸ್ಯರನ್ನು ಕಳೆದ ವರ್ಷ ಎನ್ಐಎ ಬಂಧಿಸಿತ್ತು. ಅಷ್ಟೇ ಅಲ್ಲದೇ ಸೌದಿಯಲ್ಲಿದ್ದುಕೊಂಡು ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದ  ಅಮ್ಜಾದ್ ಖಾನ್ ಅಲಿಯಾಸ್ ಆಯನ್ ಖಾನ್ ನ್ನು ಸೌದಿ ಗಡಿಪಾರು ಮಾಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT