ನವದೆಹಲಿ: ನಮ್ಮ ನೀತಿಗಳನ್ನು ಉಲ್ಲಂಘನೆ ಮಾಡುವವರ ಖಾತೆಗಳನ್ನು ಶಾಶ್ವತವಾಗಿ ವಜಾಗೊಳಿಸುತ್ತೇವೆಂದು ಟ್ವಿಟ್ಟರ್ ಬುಧವಾರ ಅಧಿಕೃತವಾಗಿ ಹೇಳಿಕೆಯನ್ನು ನೀಡಿದೆ.
ನಿಂದನಾತ್ಮಕ ಮತ್ತು ಅಶ್ಲೀಲ ಭಾಷೆಗಳನ್ನು ಬಳಕೆ ಮಾಡಿ ಬರೆದಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಟ್ವಿಟ್ಟರ್ ಖಾತೆಯನ್ನು ಕೆಲ ದಿನಗಳ ಹಿಂದಷ್ಟೇ ಟ್ವಿಟ್ಟರ್ ಸಂಸ್ಥೆ ವಜಾಗೊಳಿಸಿತ್ತು. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಈ ಹಿನ್ನಲೆಯಲ್ಲಿ ಅಧಿಕೃತವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಟ್ವಿಟ್ಟರ್ ಸಂಸ್ಥೆ, ನಮ್ಮ ನೀತಿಗಳನ್ನು ಉಲ್ಲಂಘನೆ ಮಾಡುವವರ ಖಾತೆಗಳನ್ನು ನಾವು ಶಾಶ್ವತವಾಗಿ ವಜಾಗೊಳಿಸುತ್ತೇವೆಂದು ತಿಳಿಸಿದೆ.
ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ, ಅನಿಸಿಕೆ ಹಾಗೂ ನಂಬಿಕೆಗಳನ್ನು ವ್ಯಕ್ತಪಡಿಸುವುದು ನಮಗೆ ಬೇಕು. ಯಾವಾಗ ಮಿತಿಗಳನ್ನು ಮೀರಿ ಅಶ್ಲೀಲ ಭಾಷೆಗಳನ್ನು ಬಳಕೆ ಮಾಡಿದರೆ ಅವುಗಳನ್ನು ತಡೆಯಲು ನಾವು ನೀತಿಯೆಂಬ ಗೆರೆಯನ್ನು ಎಳೆಯುತ್ತೇವೆ. ಪ್ರಜ್ಞಾಪೂರ್ವಕವಾಗಿ ಕಿರುಕುಳ, ಬೆದರಿಕೆಯೊಡ್ಡುವುದು ಮತ್ತೊಬ್ಬ ವ್ಯಕ್ತಿಯ ದನಿಯನ್ನು ಕುಗ್ಗಿಸುತ್ತದೆ. ನಮ್ಮ ನೀತಿಗಳನ್ನು ಉಲ್ಲಂಘನೆ ಮಾಡುವವರ ಖಾತೆಗಳನ್ನು ನಾನು ಶಾಶ್ವತವಾಗಿ ವಜಾಗೊಳಿಸುದ್ದೇವೆ. ಯಾರಾದರೂ ಕೆಟ್ಟದಾಗಿ ವರ್ತನೆ ತೋರಿದರೆ ಅಂತಹವ ವಿರುದ್ಧ ಜನರು ನಮಗೆ ದೂರುಗಳನ್ನು ನೀಡಬಹುದು.
ನಾನು ಒಬ್ಬ ವ್ಯಕ್ತಿಯ ಕುರಿತಂತೆ ಮಾತನಾಡುತ್ತಿಲ್ಲ. ಯಾವುದೇ ವ್ಯಕ್ತಿ ಕುರಿತಂತೆ ನಾನು ಹೇಳಿಕೆಯನ್ನು ನೀಡುತ್ತಿಲ್ಲ. ನಮ್ಮ ನೀತಿ ಹಾಗೂ ನಿಯಮಗಳು ಸ್ಪಷ್ಟವಾಗಿದ್ದು, ಅವುಗಳನ್ನು ಪಾಲಿಸುವಂತೆ ತಿಳಿಸುತ್ತಿದ್ದೇವೆಂದು ತಿಳಿಸಿದೆ.
ಜೆ ಎನ್ ಯು ವಿದ್ಯಾರ್ಥಿ-ಕಾರ್ಯಕರ್ತೆ ಶೆಹ್ಲಾ ರಶೀದ್ ಅವರ ಬಗ್ಗೆ ಅಸಭ್ಯ ರೀತಿಯಲ್ಲಿ ನಿಂದನಾತ್ಮಕ ಪ್ರತಿಕ್ರಿಯೆ ನೀಡಿದ್ದರಿಂದ ಟ್ವಿಟ್ಟರ್ ಮೇ 23 ರಂದು ಅಭಿಜಿತ್ ಅವರ ಪರಿಶೀಲಿತ ಖಾತೆಯನ್ನು ವಜಾಗೊಳಿಸಿತ್ತು. ನಂತರ ಗಾಯಕ ಟ್ವಿಟ್ಟರ್ ಅನ್ನು ದೇಶ ವಿರೋಧಿ, ಮೋದಿ ವಿರೋಧಿ ಎಂದೆಲ್ಲಾ ನಿಂದಿಸಿ ಆರೋಪ ಮಾಡಿದ್ದರು.