ದೇಶ

ಭೋಪಾಲ್: ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆ- 6 ಜನರಿಗೆ ಗಾಯ

Manjula VN
ಭೋಪಾಲ್: ಪ್ರಾರ್ಥನೆ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆ ಉಂಟಾಗಿದ್ದು, ಘರ್ಷಣೆಯಲ್ಲಿ 6 ಜನರಿಗೆ ಗಾಯವಾಗಿರುವ ಘಟನೆ ಭೋಪಾಲ್'ನ ಹಮಿಡಿಯಾ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ನಡೆದಿದೆ. 
ಆಸ್ಪತ್ರೆಯ ದ್ವಾರಕದ ಬಳಿ ಎರಡು ಪ್ರತ್ಯೇಕ ಸಮುದಾಯಗಳು ಪ್ರಾರ್ಥನೆ ಸಲ್ಲಿಸುತ್ತಿತ್ತು. ಈ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆ ಎದುರಾಗಿದೆ. ಘರ್ಷಣೆ ಏರ್ಪಡುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆಯೇ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುವುದನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಪರಿಣಾಮ ಘರ್ಷಣೆಯನ್ನು ಹತ್ತಿಕ್ಕಲು ಭದ್ರತಾ ಪಡೆಗಳೇ ಸ್ಥಳಕ್ಕೆ ಬರುವಂತಾಗಿತ್ತು. 
ಘರ್ಷಣೆಯಲ್ಲಿ ಪೊಲೀಸರ ವಾಹನಗಳು ಸೇರಿದೆದೆ ಹಲವಾಗು ಸಾರ್ವಜನಿಕ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಕೋಮು ಘರ್ಷಣೆ ಹಿನ್ನಲೆಯಲ್ಲಿ ಜುಮೆರತಿ, ಪೀರ್ ಗೇಟ್, ಚೌಕಿ ಇಮಾಂಬರ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.  
ಭೋಪಾಲ್ ಐಜಿ ಯೋಗೇಶ್ ಚೌಧರಿ ಸೇರಿದಂತೆ ಇನ್ನಿತರೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ದೌಡಾಯಿಸಿದ್ದು, ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಆಸ್ಪತ್ರೆ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸುವ ಕುರಿತಂತೆ ಕಳೆದೆರಡು ದಿನಗಳಿಂದಲೂ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಭದ್ರತೆ ಹಿನ್ನಲೆಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಯಾವುದೇ ರೀತಿಯ ಪೂಜೆ-ಪ್ರಾರ್ಥನೆಗಳನ್ನು ನಡೆಸಬಾರದು ಎಂದು ಸ್ಥಳೀಯ ಆಡಳಿತ ಮಂಡಳಿ ಆದೇಶ ನೀಡಿತ್ತು. ಆದರೂ, ಕೆಲ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು ಈ ಹಿನ್ನಲೆಯಲ್ಲಿ ಘರ್ಷಣೆ ಏರ್ಪಟ್ಟಿದೆ ಎಂದು ತಿಳಿಸಿದ್ದಾರೆ. 
SCROLL FOR NEXT