ಲಖನೌ: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಲ್ಲಿ ಸೈಡ್ ಲೈನ್ ಆಗಿರುವ ಶಿವಪಾಲ್ ಯಾದವ್ ಅವರು ಜುಲೈ 6ರಂದು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ಎಂಬ ಹೊಸ ಸಂಘಟನೆಗೆ ಜಾಲನೆ ನೀಡುವುದಾಗಿ ಬುಧವಾರ ಹೇಳಿದ್ದಾರೆ.
ಇದೇ ವೇಳೆ 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ಒಂದು ಸಂಘಟನೆ ಅಷ್ಟೆ, ರಾಜಕೀಯ ಪಕ್ಷ ಅಲ್ಲ ಎಂದು ಶಿವಪಾಲ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷವನ್ನು ಸರಿಯಾದ ದಾರಿಗೆ ತರುವುದಕ್ಕಾಗಿ ನಾವು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ಅನ್ನು ರಚಿಸಿರುವುದಾಗಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಈ ಫ್ರಂಟ್ ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ತಾವು ಇದರ ಸಂಚಾಲಕರಾಗಿರುವುದಾಗಿ ಶಿವಪಾಲ್ ಯಾದವ್ ಅವರು ಹೇಳಿದ್ದಾರೆ. ಅಲ್ಲದೆ ಸಮಾಜವಾದಿ ಪಕ್ಷದಲ್ಲಿ ಕಡೆಗಣಿಸಲ್ಪಟ್ಟಿರುವ ನಾಯಕರು 'ಸಮಾಜವಾದಿ ಸೆಕ್ಯುಲರ್ ಫ್ರೆಂಟ್' ನೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.