ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: 2016-17ನೇ ವಿತ್ತೀಯ ವರ್ಷದಲ್ಲಿ ಭಾರತೀಯರ ತಲಾದಾಯ ಇಳಿಕೆಯಾಗಿರುವುದಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ತಲಾದಾಯ ರೂ.1.03ಲಕ್ಷಕ್ಕೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿರುವ ರಾಹುಲ್ ಅವರು, ಇಳಿಕೆಯಾಗುತ್ತಿರುವ ಜಿಡಿಪಿ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮೂಲಭೂತ ವೈಫಲ್ಯಗಳನ್ನು ಮರೆಯಾಚುವ ಸಲುವಾಗಿ ಕೇಂದ್ರ ಇತರೆ ಸಮಸ್ಯೆಗಳನ್ನು ಸೃಷ್ಟಿ ಮಾಡಿ ಜನರ ಗಮನವನ್ನು ಬೇರೆ ಕಡೆ ಸೆಳೆಯುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಪಿ.ಎಲ್.ಪುಣ್ಯ ಮಾತನಾಡಿ, ದೇಶದ ಆದಾಯವನ್ನು ಶೇ.8 ರಿಂದ 7ಕ್ಕೆ ಕುಸಿಯುವಂತೆ ಮಾಡಿರುವ ಬಿಜೆಪಿ ದೇಶದ ಆರ್ಥಿಕ ಸ್ಥಿತಿ ಕುರಿತಂತೆ ಇದೀಗ ಮಾತನಾಡಬೇಕಿದೆ. ಈಗಲಾದರು ಬಿಜೆಪಿ ದೇಶದ ಆರ್ಥಿಕತೆ ವಾಸ್ತವಿಕತೆ ಚಿತ್ರಣವನ್ನು ಜನರ ಮುಂದಿಡಬೇಕಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಸಾಂಖ್ಯಿಕ ಸಚಿವಾಲಯ ಭಾರತದ ತಲಾ ಆದಾಯ ಕುರಿತಂತೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿತ್ತು. 2016-17ನೇ ಸಾಲಿನ ವಿತ್ತೀಯ ವರ್ಷದಲ್ಲಿ ಭಾರತೀಯರ ತಲಾದಾಯ ಶೇ.9.7ರಷ್ಟು ಏರಿಕೆಯಾಗಿದೆ ಎಂದು ತಿಳಿಸಿತ್ತು. ಸಚಿವಾಲಯದ ನೀಡಿರುವ ಮಾಹಿತಿಯನ್ನು ಗಮನಿಸಿದರೆ, 2015-16ರಲ್ಲಿ ರೂ.94,130ರಷ್ಟು ಇದ್ದ ತಲಾದಾಯ 16-17ನೇ ಸಾಲಿನಲ್ಲಿ 1,03,219ಗೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics