ಅರಗಿನ ಮನೆ 
ದೇಶ

ಮಹಾಭಾರತದ 'ಅರಗಿನ ಮನೆ' ಉತ್ಖನನಕ್ಕೆ ಪುರಾತತ್ವ ಇಲಾಖೆ ಅನುಮತಿ

ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಭಾರತದಲ್ಲಿ ಪಾಂಡವರು ವಾಸಿಸಿದ್ದರು ಎನ್ನಲಾದ ಅರಗಿನ ಮನೆ(ಲಕ್ಷಗ್ರಹ)ಯ ಉತ್ಖನನಕ್ಕೆ ಭಾರತೀಯ...

ಮೀರತ್(ಉತ್ತರಪ್ರದೇಶ): ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಭಾರತದಲ್ಲಿ ಪಾಂಡವರು ವಾಸಿಸಿದ್ದರು ಎನ್ನಲಾದ ಅರಗಿನ ಮನೆ(ಲಕ್ಷಗ್ರಹ)ಯ ಉತ್ಖನನಕ್ಕೆ ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಅನುಮತಿ ನೀಡಿದೆ. 
ಪಾಂಡವರು ವಾಸಿಸಿದ್ದ ಅರಗಿನ ಮನೆ ಮೀರತ್ ನ ಭಾಗ್ ಪಟ್ ಜಿಲ್ಲೆಯ ಬರ್ನಾವಾ ಪ್ರದೇಶದಲ್ಲಿ ಇದೆ ಎಂಬುದು ಸ್ಥಳೀಯರ ನಂಬಿಕೆ. ಈ ಹಿನ್ನೆಲೆಯಲ್ಲಿ ಲಕ್ಷಗ್ರಹ ಹೊಂದಿರುವ ಭೂ ಪ್ರದೇಶದ ಉತ್ಖನನಕ್ಕೆ ಅವಕಾಶ ಕೊಡಬೇಕೆಂದು ಸ್ಥಳೀಯ ಸಂಶೋಧಕರು ಆರ್ಕ್ಯೋಲಾಜಿಕಲ್ ಸರ್ವೇ ಆಫ್ ಇಂಡಿಯಾಗೆ ಮನವಿ ಸಲ್ಲಿಸಿದ್ದರು.
ಮಹಾಭಾರತ ಮಹಾಕಾವ್ಯದಲ್ಲಿನ ಅರಗಿನ ಮನೆ ತುಂಬಾ ಮಹತ್ವದ ಅಂಶವಾಗಿದೆ. ಕೌರವರು ನಿರ್ಮಿಸಿದ್ದ ಅರಗಿನ ಮನೆ ಇದಾಗಿದ್ದು ಇಲ್ಲಿ ಪಾಂಡವರನ್ನು ಜೀವಂತವಾಗಿ ಸುಡುವ ಸಂಚನ್ನು ಕೌರವರು ರೂಪಿಸಿದ್ದರು. ಆದರೆ ಪಾಂಡವರು ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡಿದ್ದರು ಎಂದು ಕಾವ್ಯದಲ್ಲಿ ಬರುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬರದ ನಡುವೆ ರಾಜ್ಯಕ್ಕೆ ಮತ್ತೊಂದು ಹೊರೆ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು CWRC ಆದೇಶ!

ರಾಹುಲ್ ಗಾಂಧಿಗೆ ಮದ್ವೆ ಆಗುವಂತೆ ಮನವೊಲಿಸಿ: CJP ವೈರಲ್ ಪ್ರತಿಭಟನಾಕಾರನ ಬಳಿ ಪ್ರಿಯಾಂಕಾ ಗಾಂಧಿ ಮನವಿ!

ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್ ನಾಯಕರಲ್ಲಿ ಕ್ಷಮೆಯಾಚಿಸಿದ ಜಮೀರ್‌ ಅಹ್ಮದ್ ಖಾನ್; ಇಲ್ಲಿದೆ ಅಸಲಿ ಕಾರಣ...

NEET ಪ್ರತಿಭಟನೆ: 18 ವರ್ಷದೊಳಗಿನ ವಿದ್ಯಾರ್ಥಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ; ಸಾಕ್ಷ್ಯ ಸಂರಕ್ಷಣೆಗೆ ಸೂಚನೆ..!

ಎಲ್ಲಕ್ಕೂ AI ಇರುವಾಗ 'ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳೇಕೆ 10 ವರ್ಷ ವ್ಯಯಿಸಬೇಕು? ನೀಟ್‌ಗೆ ಏಕೆ ತಯಾರಿ ನಡೆಸಬೇಕು?: Ramgopal Verma