ದೇಶ

ಎನ್ ಡಿಎ ಮತ್ತು ಯುಪಿಎ ಪ್ರವಾಸೋದ್ಯಮವನ್ನು ಕಡೆಗಣಿಸಿವೆ: ಶಶಿ ತರೂರ್

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಎರಡೂ ಸರ್ಕಾರಗಳು ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಕಡೆಗಣಿಸಿವೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಹೇಳಿದ್ದಾರೆ.
ಈ ಹಿಂದಿನ ತಮ್ಮ ಯುಪಿಎ ಸರ್ಕಾರವನ್ನು ಟೀಕಿಸಿರುವ ಕೇರಳ ಸಂಸದ ಶಶಿ ತರೂರ್ ಅವರು, ದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.
ಸಾಹಿತ್ಯ ಉತ್ಸವ ಪೆಂಗ್ವಿನ್ ಫೀವರ್ 2017ರಲ್ಲಿ ಮಾತನಾಡಿದ ಮಾಜಿ ಸಚಿವ, ಈ ಹಿಂದಿ ಸ್ವಂತಃ ನನ್ನ ಸರ್ಕಾರ ಮತ್ತು ಈಗೀನ ಪ್ರಧಾನಿ ಮೋದಿ ಇಬ್ಬರೂ ಪ್ರವಾಸೋದ್ಯಮದಲ್ಲಿ ಒಂದು ಸಾವಿರ ಡಾರಲ್ ಹೂಡಿಕೆ ಮಾಡಿದರೆ ಅದರ ಎಂಟುಪಟ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದನ್ನು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ ಎಂದರು. 
ಭಾರತದಲ್ಲಿ ಒಂದು ವರ್ಷಕ್ಕೆ ಭೇಟಿ ನೀಡುವಷ್ಟು ವಿದೇಶಿಗರು ದುಬೈ ಮತ್ತು ಸಿಂಗಾಪುರದಲ್ಲಿ ಒಂದು ದಿನದಲ್ಲಿ ಭೇಟಿ ನೀಡುತ್ತಾರೆ. ಆ ರೀತಿಯಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ನಾವು ವಿಫಲವಾಗಿದ್ದೇವೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ತರೂರ್ ಹೇಳಿದ್ದಾರೆ.
SCROLL FOR NEXT