ಶ್ರೀನಗರ: "ಭಟ್ ಒಬ್ಬರನ್ನು ಹತ್ಯೆ ಮಾಡುವ ಮೂಲಕ ಕಣಿವೆಯ ಯುವಕರ ಉತ್ತಮ ಭವಿಷ್ಯವನ್ನು ಹಾಳು ಮಾದಲು ಸಾಧ್ಯವಾಗುವುದಿಲ್ಲ ಎಂಬುದನ್ನು ಉಗ್ರರು ಮನಗಾಣಬೇಕು" ನೆನ್ನೆ ಕಾಶ್ಮೀರದಲ್ಲಿ ನಡೆದ ಬಿಜೆಪಿ ಯುವಮೋರ್ಚಾದ ನಾಯಕನ ಹತ್ಯೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೀಗೆಂದು ಪ್ರತಿಕ್ರವಿಸಿದ್ದಾರೆ.
ಬಿಜೆಪಿ ಯುವಮೋರ್ಚಾದ ನಾಯಕ ಗೌಹರ್ ಅಹ್ಮದ್ ಭಟ್ (30) ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಿನ್ನೆ ಹತ್ಯೆಗೊಳಗಾಗಿದ್ದು ಕಿಲೂರಾ ಎಂಬಲ್ಲಿರುವ ತೋಟವೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಉಗ್ರರು ಭಟ್ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.
ಭಟ್ ಹತ್ಯೆ ಸುದ್ದಿ ತಿಳಿದ ಅಮಿತ್ ಶಾ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂಡು ಸಂತಾಪ ಸೂಚಿಸಿದ್ಡಾರೆ