ಹೈದರಾಬಾದ್: ಸರ್ಕಾರಿ ಶಿಕ್ಷಕ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದ ವಿಡಿಯೋದಲ್ಲಿದ್ದ ರಾಚರ್ಲ ವೆಂಕಟ್ ಅಲಿಯಾಸ್ ವೆಂಕನ್ನ ಅವರನ್ನು ಡಿಇಒ ಡಿ ರಾಧಾಕೃಷ್ಣ ಜಿಲ್ಲಾಧಿಕಾರಿ ಡಿ.ಕೃಷ್ಣ ಭಾಸ್ಕರ್ ಅವರ ಸೂಚನೆಯ ಮೇರೆಗೆ ಅಮಾನತುಗೊಳಿಸಿದ್ದಾರೆ.
ಡಿಇಒ ಪ್ರಕಾರ, ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ(ಆರ್ ಎಂಪಿ) ಆಗಿದ್ದ ರಾಚಾರ್ಲ ವೆಂಕಟ್ ನಂತರ ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡಿದ್ದು, ಯೆಲ್ಲಾರೆಡ್ಡಿಪೇಟ್ ನ ಆಂಗ್ಲ ಭಾಷಿಕ ಶಾಲೆಯ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಜೆ ದಿನಗಳಲ್ಲಿ ವೈದ್ಯ ವೃತ್ತಿಯನ್ನೂ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಹಿಂದೆಯೂ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯನ್ನು ಪರಿಗಣಿಸದೇ ಖಾಸಗಿ ಆಸ್ಪತ್ರೆಯಲ್ಲಿ ಹೊಟ್ಟೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.