ಭೂಪಾಲ್: "ನನ್ನನ್ನು ಈ ಪರಿಸ್ಥಿತಿಗೆ ತಂದ ಅತ್ಯಾಚಾರಿಗಳನ್ನು ಸುಮ್ಮನೆ ಬಿಡಬೇಡಿ, ಅವರನ್ನು ಸಾರ್ವಜನೈಕ ಸ್ಥಳದಲ್ಲೇ ನೇಣಿಗೇರಿಸಿ" ಎಂದು ಭೂಪಾಲ್ ಅತ್ಯಾಚಾರ ಪ್ರಕರಣ ಸಂತ್ರಸ್ತೆ ಒತ್ತಾಯಪೂರ್ವಕ ಬೇಡಿಕೆ ಇಟ್ಟಿದ್ದಾಳೆ.
"ತಾನು ಅತ್ಯಾಚಾರಕ್ಕೊಳಗಾಗಿದ್ದು ಆರೋಪಿಗಳ ವಿರುದ್ಧ ದೂರು ನೀಡಲಿಕ್ಕಾಗಿ ಒಂದರಿಂದ ಇನ್ನೊಂದು ಪೋಲೀಸ್ ಠಾಣೆಗೆ ಅಲೆಯಬೇಕಾಯಿತು. ಪೊಲೀಸರ ವರ್ತನೆ ಬಹಳ ಕೆಟ್ಟದಾಗಿತ್ತು. ಯಾರೊಬ್ಬರೂ ಪ್ರಕರಣ ಸಂಬಂಧ ದೂರು ತೆಗೆದುಕೊಳ್ಳಲೂ ನಿರಾಕರಿಸಿದ್ದರು. ಹಬೀಬ್ಗಂಜ್ ಸಬ್ ಇನ್ಸ್ಪೆಕ್ಟರ್ ಹೊರತಾಗಿ ನ್ನಾರೂ ಸಹಾಯ ಮಾಡಲಿಲ್ಲ" ಘಟನೆಯ ಬಗ್ಗೆ ಎಎನ್ ಐ ಗೆ ವಿವರ ನೀಡಿದ್ದ ಯುವತಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ
"ನನ್ನ ತಂದೆ ತಾಯಿಯರಿಬ್ಬರೂ ಪೋಲೀಸರಾಗಿದ್ದೂ ನನಗೆ ಇಂತಹಾ ಸ್ಥಿತಿ ಒದಗಿದೆ. ಇನ್ನು ಸಾಮಾನ್ಯ ಜನರ ಬಗೆಗೆ ಯೋಚಿಸಿ?"
"ನಾನು ಆರೋಪಿಗಳನ್ನು ಪೋಲೀಸ್ ಠಾಣೆಗೆ ಕರೆದೊಯ್ದಿದ್ದೇನೆ. ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ ಪೋಲೀಸರು ಮಾತ್ರ ೈನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ." ಯುವತಿ ವಿವರಿಸಿದ್ದಾಳೆ.
ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ 19 ವರ್ಷದ ಯುವತಿಯ ಕೈಕಾಲು ಕಟ್ಟಿಹಾಕಿ, ಆಕೆಯನ್ನು ವಿವಸ್ತ್ರಗೊಳಿಸಿ, ಸೇತುವೆಯ ಕೆಳಗಡೆಯಲ್ಲಿ ನಾಲ್ವರು ಕಾಮುಕರು ಸತತ ಮೂರು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದರು.ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಈ ಘಟನೆಯಿಂದ ಮಧ್ಯಪ್ರದೇಶದ ಸರ್ಕಾರಕ್ಕೆ ಭಾರೀ ಮುಜುಗರವಾಗಿದೆ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics