ದೇಶ

ನೋಟುಗಳ ನಿಷೇಧ ನಂತರ ಶೆಲ್ ಕಂಪೆನಿಗಳ 4 ಸಾವಿರ ಕೋಟಿ ರೂ.ಗೂ ಅಧಿಕ ವಂಚನೆ ಪತ್ತೆ: ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಚಲಾವಣೆ ನಿಷೇಧಿಸಿ ಒಂದು ವರ್ಷವಾಗುತ್ತಾ ಬಂದಿರುವ ಈ ಸಮಯದಲ್ಲಿ ತನ್ನ ನಿರ್ಧಾರದಿಂದ ಉತ್ತಮ ಫಲಿತಾಂಶ ದೊರಕಿದೆ. ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದೆ.
ನಿನ್ನೆ ಹಿಮಾಚಲ ಪ್ರದೇಶದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನೋಟುಗಳ ಅಮಾನ್ಯತೆ ನಂತರ ಮೂರು ಲಕ್ಷಕ್ಕಿಂತಲೂ ಅಧಿಕ ಶೆಲ್ ಕಂಪೆನಿಗಳು ಮುಚ್ಚಿವೆ. 5,000 ಕ್ಕೂ ಅಧಿಕ ವಂಚನೆ ಎಸಗುತ್ತಿದ್ದ ಕಂಪೆನಿಗಳನ್ನು ಪತ್ತೆಹಚ್ಚಿ 4,000 ಕೋಟಿ ರೂಪಾಯಿಗೂ ಅಧಿಕ ವಂಚನೆಯನ್ನು ಕಂಡುಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತನಿಖೆ ನಡೆಸಲಾಗುತ್ತಿದ್ದು ಮತ್ತಷ್ಟು ವಂಚನೆಗಳು ಹೊರಬರುವ ಸಾಧ್ಯತೆಯಿದೆ ಎಂದು ಹೇಳಿದರು.
SCROLL FOR NEXT