ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಕಮಲ್ 
ದೇಶ

ಭ್ರಷ್ಟಾಚಾರ ಮತ್ತು ಜನರ ಸಮಸ್ಯೆ ಬಹಿರಂಗಪಡಿಸಲು ಆ್ಯಪ್ ಬಿಡುಗಡೆ ಮಾಡಿದ ಕಮಲ್ ಹಾಸನ್

ಭ್ರಷ್ಟಾಚಾರ ಬಹಿರಂಗಪಡಿಸಲು ಮತ್ತು ಜನರ ಸಮಸ್ಯೆ ಆಲಿಸಲೆಂದೇ "maiamwhistle" ಆ್ಯಪ್ ಅನ್ನು ಬಿಡುಗಡೆ ಮಾಡುತ್ತಿರುವುದಾಗಿ ಖ್ಯಾತ ನಟ ಕಮಲ್ ಹಾಸನ್ ಚೆನ್ನೈನಲ್ಲಿ ಮಂಗಳವಾರ ಹೇಳಿದ್ದಾರೆ.

ಚೆನ್ನೈ: ಭ್ರಷ್ಟಾಚಾರ ಬಹಿರಂಗಪಡಿಸಲು ಮತ್ತು ಜನರ ಸಮಸ್ಯೆ ಆಲಿಸಲೆಂದೇ "maiamwhistle" ಆ್ಯಪ್ ಅನ್ನು ಬಿಡುಗಡೆ ಮಾಡುತ್ತಿರುವುದಾಗಿ ಖ್ಯಾತ ನಟ ಕಮಲ್ ಹಾಸನ್ ಚೆನ್ನೈನಲ್ಲಿ ಮಂಗಳವಾರ ಹೇಳಿದ್ದಾರೆ.
ತಮ್ಮ 63ನೇ ಜನ್ಮ ದಿನಾಚರಣೆ ನಿಮಿತ್ತ ಖಾಸಗಿ ಹೊಟೆಲ್ ನಲ್ಲಿ ನಡೆದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ತಮಿಳುನಾಡು ಜನತೆ ಬದಲಾವಣೆ ರೂಪದಲ್ಲಿ ನನನ್ನು ನೋಡುತ್ತಿದ್ದಾರೆ. ಅವರ  ನಂಬಿಕೆಗೆ ನಾನು ಆಭಾರಿ..ತಡವಾಗಿ ರಾಜಕೀಯದ ಬಗ್ಗೆ ಯೋಚಿಸಿದ್ದಕ್ಕೆ ಕ್ಷಮೆ ಇರಲಿ ಎಂದು ಹೇಳಿದರು.
" ತಮ್ಮ ನೂತನ ಆ್ಯಪ್ ರಾಜ್ಯದ ಜನತೆಯ ನೆರವಿಗೆ ನಿಲ್ಲಲ್ಲಿದ್ದು, ಭ್ರಷ್ಟಾಚಾರ ಬಹಿರಂಗಪಡಿಸಲು ಮತ್ತು ಜನರ ಸಮಸ್ಯೆ ಆಲಿಸಲೆಂದೇ ಈ ಆ್ಯಪ್ ರೂಪುಗೊಂಡಿದೆ. ನಾನು  ಜನ ಸೇವೆಗಾಗಿಯೇ ರಾಜಕೀಯಕ್ಕೆ ಬರುತ್ತಿದ್ದೇನೆ.  ಆದರೆ ತಡವಾಗಿ ರಾಜಕೀಯದ ಬಗ್ಗೆ ಯೋಚಿಸಿದ್ದಕ್ಕೆ ಕ್ಷಮೆ ಇರಲಿ.  ಇನ್ನು ನಾನು ಬಹುದೊಡ್ಡ ಕನಸಿನೊಂದಿಗೆ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ತಮಿಳುನಾಡು ಜನತೆ ಬದಲಾವಣೆ ಬಯಸುತ್ತಿದ್ದು, ಇದೇ ಕಾರಣಕ್ಕಾಗಿ ಅವರು  ನನ್ನನ್ನು ವಿಶೇಷವಾಗಿ ನೋಡುತ್ತಿದ್ದಾರೆ. ಕನಸುಗಳೇ ಹೊಸ ಅನ್ವೇಷಣೆಗೆ ದಾರಿ ಮಾಡುತ್ತವೆ. ಹೊಸ ಅನ್ವೇಷಣೆಗಳು ಮುಂದೆ ಬದುಕಾಗುತ್ತದೆ. ತುಂಬಾ ಜನ ಇಂದು ನಾನು ಹೊಸ ಪಕ್ಷ ಘೋಷಣೆ ಮಾಡುತ್ತೇನೆ ಎಂದು  ಭಾವಿಸಿದ್ದರು. ಆದರೆ ನಾನು ನೆಪಮಾತ್ರಕ್ಕೆ ಪಕ್ಷ ಘೋಷಣೆ ಮಾಡಲು ಸಿದ್ಧನಿಲ್ಲ. ಪಕ್ಷ ಸ್ಥಾಪನೆ ಕುರಿತಂತೆ ಸಾಕಷ್ಟು ವಿಚಾರಗಳನ್ನು ನಾನು ಅರಿಯಬೇಕಿದೆ. ಅಂತೆಯೇ ಈ ಬಗ್ಗೆ ತಳಮಟ್ಟದಲ್ಲಿ ಕೆಲಸ ಕಾರ್ಯಗಳು ಆಗಬೇಕಿದೆ.  ಹೀಗಾಗಿ ಇದು ವಿಳಂಬವಾಗುತ್ತದೆ ಎಂದು ಕಮಲ್ ಹೇಳಿದರು.
ಇದೇ ವೇಳೆ ತಮ್ಮನ್ನು ಸುತ್ತುವರೆದಿರುವ ವಿವಾದಗಳ ಕುರಿತು ಮಾತನಾಡಿದ ಕಮಲ್, ನಾನು ಯಡಪಂಥೀಯನೂ ಅಲ್ಲ ಬಲ ಪಂಥೀಯನೂ ಅಲ್ಲ. ನಾನು ಎಂದಿಗೂ ಭಯೋತ್ಪಾದಕರು ಎಂಬ ಪದವನ್ನು ಬಳಕೆ ಮಾಡಿಲ್ಲ. ನಾನು  ಅಂದು ಹಿಂದೂ ತೀವ್ರವಾದಿಗಳು ಎಂದು ಹೇಳಿದ್ದೆ. ಹಿಂದೂಗಳ ಭಾವನೆಗೆ ಧಕ್ಕೆ ಮಾಡಬೇಕೆಂಬ ಭಾವನೆ ನನ್ನಲ್ಲಿ ಇಲ್ಲ. ನಾನೂ ಕೂಡ ಹಿಂದೂ ಕುಟುಂಬದಿಂದ ಬಂದವನಾಗಿದ್ದು, ಹಿಂದೂಗಳ ವಿರುದ್ಧ ನಾನು ಮಾತನಾಡಿಲ್ಲ.  ನನಗೂ ಲಕ್ಷಾಂತರ ಮಂದಿ ಹಿಂದೂ ಅಭಿಮಾನಿಗಳಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
ಪ್ರಸ್ತುತ ನನ್ನ ರಾಜಕೀಯ ಪ್ರವೇಶ ಹಾಗೂ ಪಕ್ಷ ಸ್ಥಾಪನೆ ಕುರಿತು ನಾನು ಕಾರ್ಯ ಮಗ್ನನಾಗಿದ್ದು, ಈ ಬಗ್ಗೆ ತಳಮಟ್ಟದಲ್ಲಿ ಕೆಲಸಗಳು ಆರಂಭವಾಗಿವೆ. ಶೀಘ್ರದಲ್ಲೇ ನಾನು ಈ ಹಿಂದೆ ಘೋಷಿಸಿದ್ದ ಚಿತ್ರಗಳನ್ನು ಪೂರ್ಣಗೊಳಿಸಿ ಆ  ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಸಮಸ್ಯೆ ಮತ್ತು ಅವರ ಅಭಿಪ್ರಾಯಗಳನ್ನು ಪಡೆಯುತ್ತೇನೆ. ಎಲ್ಲ ಜಿಲ್ಲೆಗಳಲ್ಲೂ ಸ್ವಯಂ ಪ್ರೇರಿತರಾಗಿ ಯುವಕರು ಮುಂದೆ  ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲ ಪಕ್ಷಗಳೂ ನಮ್ಮ ಸಮಾಜ ಸೇವಾ ಕಾರ್ಯಗಳಿಗೆ ಶ್ಲಾಘಿಸುತ್ತಿದ್ದಾರೆ. ಈ ಹಂತದಲ್ಲಿ ನಾನು ಮತ್ತೆ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಕಮಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT