ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನೋಟು ನಿಷೇಧ ದೇಶದ ದೊಡ್ಡ ಆರ್ಥಿಕ ದುರಂತ: ರಾಹುಲ್ ಗಾಂಧಿ

ನೋಟು ನಿಷೇಧ ದೇಶ ಕಂಡ ಅತ್ಯಂತ ದೊಡ್ಡ ಆರ್ಥಿಕ ದುರಂತ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 8 Nov 2017, 8:12 am
ನವದೆಹಲಿ: ನೋಟು ನಿಷೇಧ ದೇಶ ಕಂಡ ಅತ್ಯಂತ ದೊಡ್ಡ ಆರ್ಥಿಕ ದುರಂತ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೋಟು ನಿಷೇಧ ಜಾರಿಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ನೋಟು ನಿಷೇಧ ದೇಶ ಕಂಡ ಅತ್ಯಂತ ದೊಡ್ಡ ಆರ್ಥಿಕ  ದುರಂತ ಎಂದು ಬಣ್ಣಿಸಿದ್ದಾರೆ. ಅಂತೆಯೇ ನೋಟು ನಿಷೇಧದಿಂದ ಆರ್ಥಿಕ ತೊಂದರೆಗೆ ಒಳಗಾದ ಕೋಟ್ಯಂತರ ಭಾರತೀಯರೊಂದಿಗೆ ತಾವಿದ್ದು, ಪ್ರಧಾನಿ ಮೋದಿ ಅವರ ಮೂರ್ಖ ನಿರ್ಧಾರದಿಂದ ದೇಶದ ಜನತೆ ಸಮಸ್ಯೆ  ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ಇನ್ನು ನಿನ್ನೆಯಷ್ಟೇ ಈ ಬಗ್ಗೆ ಮಾಜಿ ಪ್ರಧಾನಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ವ್ಯವಸ್ಥಿತ  ಲೂಟಿ ಕಾನೂನು ಬಾಹಿರ ಸುಲಿಗೆ ಎಂದು ಸಿಂಗ್ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಸರ್ಕಾರದ ಮೂರ್ಖ ಕ್ರಮದಿಂದಾಗಿ ಲಕ್ಷಾಂತರ ಸಣ್ಣ ಉದ್ಯಮಗಳು ಬಾಗಿಲು ಹಾಕಿದ್ದು, ಸಣ್ಣ ಉದ್ದಿಮೆಗಳ ಬೆನ್ನೆಲುಬನ್ನೇ ಸರ್ಕಾರ ಮುರಿದು ಹಾಕಿದೆ  ಎಂದು ಕಿಡಿಕಾರಿದ್ದರು.

Advertisement

Advertisement

ಅಂತೆಯೇ ಅಸಮರ್ಪಕ ಜಿಎಸ್ ಟಿ ಜಾರಿಯನ್ನೂ ಕೂಡ ಮಾಜಿ ಪ್ರಧಾನಿ ಸಿಂಗ್ ಟೀಕಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement