ಸಾಂದರ್ಭಿಕ ಚಿತ್ರ 
ದೇಶ

ಅಪನಗದೀಕರಣಕ್ಕೆ ವರ್ಷ: ತಮಿಳುನಾಡು, ಕೇರಳದಲ್ಲಿ ಭಾರೀ ವಿರೋಧ, ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಬೆಂಬಲ

ಅಪನಗದೀಕರಣಕ್ಕೆ ಇಂದಿಗೆ ವರ್ಷ ಆಗಿರುವ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವಿಶೇಷ ಸಮೀಕ್ಷೆಯೊಂದನ್ನು ನಡೆಸಿತ್ತು.

ಚೆನ್ನೈ: ಅಪನಗದೀಕರಣಕ್ಕೆ ಇಂದಿಗೆ ವರ್ಷ ಆಗಿರುವ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ವಿಶೇಷ ಸಮೀಕ್ಷೆಯೊಂದನ್ನು ನಡೆಸಿತ್ತು. ಆ ಸಮೀಕ್ಷೆಯು ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಈ ಮಹತ್ವದ ಕಾರ್ಯಕ್ರಮದ ಬಗ್ಗೆ ವಿವಿಧ ರಾಜ್ಯಗಳ ಜನರ ಗ್ರಹಿಕೆಗಲಲ್ಲಿ ಮಹತ್ವದ ವ್ಯತ್ಯಾಸಗಳಿವೆ.
ತಮಿಳು ನಾಡು ಮತ್ತು ಕೇರಳದ ಜನರು ಪ್ರಧಾನಿಯವರ ಈ ಉಪಕ್ರಮದ ಬಗೆಗೆ ಹೆಚ್ಚಾಗಿ ಋಣಾತ್ಮಕ ದೃಷ್ಟಿಕೋನವನ್ನು ಹೊಂದಿದ್ದು ಕಂಡು ಬಂದಿದೆ. ತಮಿಳುನಾಡಿನ ಶೇ. 63ರಷ್ಟು ಜನರು ಹಾಗೂ ಕೇರಳದ ಶೇ. 59.4ರಷ್ಟು ಜನ ಅಪನಗದೀಕರಣದ ವಿರುದ್ಧ ಅಭಿಪ್ರಾಯ ಹೊಂದಿದ್ದಾರೆ.
ಆದರೆ ಇದೇ ವೇಳೆ ಕರ್ನಾತಕ, ಸೀಮಾಂದ್ರ ಮತ್ತು ತೆಲಂಗಾಣದಲ್ಲಿ ಪ್ರಧಾನಿ ನಡೆಗೆ ಸ್ವಾಗತ ವ್ಯಕ್ತವಾಗಿದೆ.ಕರ್ನಾಟಕದ ಶೇ. 69ರಷ್ಟು ಮಂದಿ ಅಪನಗದೀಕರಣವನ್ನು ಬೆಂಬಲಿಸಿರುವುದು ಸಮೀಕ್ಷೆಯಲ್ಲಿ ವರದಿಯಾಗಿದೆ. ಅಂತೆಯೇ ಆಂದ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಕ್ರಮವಾಗಿ ಶೇ. 65.9, ಶೇ.54.7 ಜನರು ಈ ಉಪಕ್ರಮವನ್ನು ಬೆಂಬಲಿಸಿದ್ದಾರೆ.
ಒಟ್ಟಾರೆ ಸಮೀಕ್ಷೆಯಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ಕೇಂದ್ರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವುದು ಕಂಡುಬಂದಿದೆ. ಆದರೆ ಕರ್ನಾಟಕ, ತೆಲಂಗಾಣ ಮತ್ತು ಆಂದ್ರ ಪ್ರದೇಶದ ಜನರು ಅಪನಗದೀಕರಣವನ್ನು ಬೆಂಬಲಿಸಿದ್ದಾರೆ ಆದರೂ ಪ್ರಧಾನಿ ಮೋದಿ ಇದರ ಉದ್ದೇಶ ಸಾಧನೆಯಲ್ಲಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.  ಅಪನಗದೀಕರಣದ ಪರಿಣಾಮ ಹೆಚ್ಚು ತೊಂದರೆಗೆ ಒಳಗಾಗಿದ್ದು ಮದ್ಯಮ ವರ್ಗದ ಜನರೆನ್ನುವುದು ಎಲ್ಲಾ ಐದು ರಾಜ್ಯಗಳ ಏಕಾಭಿಪ್ರಾಯವಾಗಿದೆ. ಇಅದು ರಾಜ್ಯಗಳ ಕನಿಷ್ಠ ಶೇ.40 ರಷ್ಟು ಮದ್ಯಮ ವರ್ಗದವರು `500 ಮತ್ತು `1,000 ಮುಖಬೆಲೆಯ ನೊಟಿನ ರದ್ದತಿಯಿಂದ ತೊಂದರೆಗೊಳಗಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video