ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಖ್ಯಾತ ಕಥಕ್ ನೃತ್ಯಗಾರ್ತಿ ಸಿತಾರ ದೇವಿಗೆ ಗೂಗಲ್-ಡೂಡಲ್ ಗೌರವ

ದೇಶ ಕಂಡ ಅದ್ಬುತ ನೃತ್ಯಗಾರ್ತಿಯರಲ್ಲಿ ಒಬ್ಬರಾದ ಖ್ಯಾತ ಕಥಕ್ ಕಲಾವಿದೆ ಸಿತಾರಾ ದೇವಿ ಅವರಿಗೆ ಅಂತರ್ಜಾಲ ಸುದ್ದಿ ಜಾಲತಾಣ ಗೂಗಲ್-ಡೂಡಲ್ ಮೂಲಕ ಅವರ ಜನ್ಮ ದಿನಾಚರಣೆಯನ್ನು ನೆನಪಿಸಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 8 Nov 2017, 9:00 am
ನವದೆಹಲಿ: ದೇಶ ಕಂಡ ಅದ್ಬುತ ನೃತ್ಯಗಾರ್ತಿಯರಲ್ಲಿ ಒಬ್ಬರಾದ ಖ್ಯಾತ ಕಥಕ್ ಕಲಾವಿದೆ ಸಿತಾರಾ ದೇವಿ ಅವರಿಗೆ ಅಂತರ್ಜಾಲ ಸುದ್ದಿ ಜಾಲತಾಣ ಗೂಗಲ್-ಡೂಡಲ್ ಮೂಲಕ ಅವರ ಜನ್ಮ ದಿನಾಚರಣೆಯನ್ನು ನೆನಪಿಸಿದೆ.
ನವೆಂಬರ್ 8ರಂದು ಸಿತಾರಾ ದೇವಿ ಅವರ ಜನ್ಮ ದಿನವಾಗಿದ್ದು, ಇಂದು ಅವರ 97ನೇ ಜನ್ಮದಿನವಾಗಿದೆ. ಹೀಗಾಗಿ ಗೂಗಲ್ ತನ್ನ ಸರ್ಚ್ ಎಂಜಿನ್ ನಲ್ಲಿ ನೃತ್ಯಕಲಾವಿದೆಯ ಸುಂದರ ಚಿತ್ರ ಬಿಡಿಸುವ ಮೂಲಕ ಲೆಜೆಂಡ್  ನೃತ್ಯಗಾರ್ತಿಗೆ ಗೌರವ ಅರ್ಪಣೆ ಮಾಡಿದೆ. ಸಿತಾರಾ ದೇವಿ ಅವರ ಮೂಲ ವಾರಣಾಸಿಯಾದರೂ ಅವರು ಹುಟ್ಟಿದ್ದು ಮಾತ್ರ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ. ಅವರ ತಂದೆ ಸುಖದೇವ್ ಮಹಾರಾಜ್ ಕೂಡ ಕಥಕ್ ನೃತ್ಯ  ಕಲಾವಿದರಾಗಿದ್ದರು.  ಅವರ ತಾಯಿ ಮತ್ಸ್ಯ ಕುಮಾರ್ ಅವರು ನೇಪಾಳದ ರಾಜವಂಶಸ್ಥ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಸಿತಾರ ದೇವಿ ಅವರ ನೃತ್ಯ ಎಷ್ಟು ಖ್ಯಾತಿ ಗಳಿಸಿತ್ತು ಎಂದರೆ ಅವರ 12ನೇ ವಯಸ್ಸಿನಲ್ಲೇ ಹಿಂದಿ ಚಿತ್ರಕ್ಕಾಗಿ ನಿರ್ದೇಶಕ ನಿರಂಜನ್ ಶರ್ಮಾ ಎಂಬುವವರು ಅವರಿಗೆ ಅವಕಾಶ ನೀಡಿದ್ದರು. ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ  ಸಿತಾರಾ ದೇವಿ ತಮ್ಮ ನೃತ್ಯ ಪ್ರದರ್ಶನ ಮಾಡಿದ್ದರು. 1951ರಲ್ಲಿ ತೆರೆಕಂಡ ನಾಗಿನ, 1954ರಲ್ಲಿ ರೋಟಿ, ವತನ್ ಮತ್ತು 1957ರಲ್ಲಿ ಅಂಜಲಿ ಚಿತ್ರಗಳಲ್ಲಿ ಸಿತಾರಾ ದೇವಿ ನೃತ್ಯ ಪ್ರದರ್ಶನ ನೀಡಿದ್ದರು.

Advertisement

Advertisement

ನೃತ್ಯಕ್ಷೇತ್ರದಲ್ಲಿನ ಅವರ ಅಮೋಘ ಸಾಧನೆಗಾಗಿ 1969ರಲ್ಲಿ ಸಂಗೀತ್ ನಾಟಕ್ ಆಕಾಡೆಮಿ ಪ್ರಶಸ್ತಿ, 1973ರಲ್ಲಿ ಪದ್ಮಶ್ರೀ ಪ್ರಶಸ್ತಿ, 1995ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಲಾಗಿತ್ತು. ಕೇಂದ್ರ ಸರ್ಕಾರ ಸಿತಾರಾ ದೇವಿ ಅವರಿಗೆ  ಪದ್ಮ ಭೂಷಣ ಪ್ರಶಸ್ತಿ ಕೂಡ ಘೋಷಣೆ ಮಾಡಿತ್ತು. ಆದರೆ ಅವರು ಪ್ರಶಸ್ತಿಯನ್ನು ಕಾರಣಾಂತರಗಳಿಂದ ನಿರಾಕರಿಸಿದ್ದರು.
ತಮ್ಮ 94ನೇ ವಯಸ್ಸಿನಲ್ಲಿ 2014ರ ನವೆಂಬರ್ 25ರಂದು ಸಿತಾರಾ ದೇವಿ ಅವರು ಮುಂಬೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments