ಸಂಗ್ರಹ ಚಿತ್ರ 
ದೇಶ

ಮಿತಿ ಮೀರಿದ ವಾಯು ಮಾಲಿನ್ಯ: ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎನ್ ಜಿಟಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲೀನ್ಯ ಮಿತಿ ಮೀರಿದ್ದು, ಅಪಾಯದ ಮಟ್ಟಕ್ಕೇರಿರುವ ಬೆನ್ನಲ್ಲೇ ಹಸಿರು ನ್ಯಾಯಾಧಿಕರಣ ದೆಹಲಿ ಸರ್ಕಾರ ಹಾಗೂ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲೀನ್ಯ ಮಿತಿ ಮೀರಿದ್ದು, ಅಪಾಯದ ಮಟ್ಟಕ್ಕೇರಿರುವ ಬೆನ್ನಲ್ಲೇ ಹಸಿರು ನ್ಯಾಯಾಧಿಕರಣ ದೆಹಲಿ ಸರ್ಕಾರ ಹಾಗೂ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಗಳನ್ನು ತೀವ್ರ  ತರಾಟೆಗೆ ತೆಗೆದುಕೊಂಡಿದೆ.
ವಾಯು ಮಾಲೀನ್ಯ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ದೆಹಲಿ ಮಾತ್ರವಲ್ಲದೇ ದೆಹಲಿ ಸುತ್ತಮುತ್ತ ಮುನ್ಸಿಪಲ್ ಕಾರ್ಪೋರೇಷನ್ ಗಳನ್ನು ಹಸಿರು ನ್ಯಾಯಾಧಿಕರಣ ತೀವ್ರ ತರಾಟೆಗೆ ತೆಗೆದುಕೊಂಡಿತು. ಈ ವೇಳೆ ಸರ್ಕಾರ  ಹಾಗೂ ಮುನ್ಸಿಪಲ್ ಕಾರ್ಪೋರೇಷನ್ ಗಳನ್ನು ಉದ್ದೇಶಿಸಿದ ಹಸಿರು ನ್ಯಾಯಾಧಿಕರಣ, ದೆಹಲಿಯಲ್ಲಿ ಸುಮಾರು ವರ್ಷಗಳಿಂದಲೇ ವಾಯು ಮಾಲೀನ್ಯ ಮಿತಿ ಮೀರಿದೆ. ಹೀಗಿದ್ದು ಸ್ಥಳೀಯ ಸರ್ಕಾರ ಹಾಗೂ ಸ್ಥಳೀಯ  ಕಾರ್ಪೋರೇಷನ್ ಗಳು ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿದ್ದೇ ಆದರೆ ಇಂದು ಇಂತಹ ವಿಷಮ ಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದೆ.
ಇದೇ ವೇಳೆ ಕಾನೂನು ಮೀರಿದವರಿಗೆ ನೋಟಿಸ್ ನೀಡಲಾಗಿದೆ ಎಂಬ ದೆಹಲಿ ಸರ್ಕಾರದವನ್ನೂ ತರಾಟೆಗೆ ತೆಗೆದುಕೊಂಡ ಎನ್ ಜಿಟಿ, ಕಾನೂನು ಮೀರಿದವಿರೆಗೆ ಸಾಕಷ್ಟು ಬಾರಿ ನೋಟಿಸ್ ಜಾರಿ ಮಾಡಲಾಗಿದೆಯಷ್ಟೇ..ಆದರೆ  ಕ್ರಮ ಕೈಗೊಂಡಿಲ್ಲ. ನಿನ್ನೆ ದೆಹಲಿಯಲ್ಲಿ 100ರಷ್ಟಿರಬೇಕಿದ್ದ ಪಿಎಂ 10 ಪ್ರಮಾಣ 986ಕ್ಕೇರಿದೆ. 60ರಷ್ಟಿರಬೇಕಿದ್ದ ಪಿಎಂ 2.5 ಪ್ರಮಾಣ 420ಕ್ಕೆ ಏರಿಕೆಯಾಗಿದೆ. ದೆಹಲಿಯ ಪ್ರತಿಯೊಬ್ಬ ನಾಗರೀಕನಿಗೂ ಸುರಕ್ಷಿತ ಮತ್ತು ಜೀವಿಸಲು  ಯೋಗ್ಯವಾದ ವಾತಾವರಣದಲ್ಲಿ ಜೀವಿಸುವ ಹಕ್ಕಿದೆ. ಇದನ್ನು ಸರ್ಕಾರ ತನ್ನ ನಿರ್ಲಕ್ಷ್ಯದಿಂದ ಕಸಿಯುವ ಹಾಗಿಲ್ಲ. ನಗರದ ಎಲ್ಲ ಮಾಲೀನ್ಯ ನಿಯಂತ್ರಣ ಮಂಡಳಿಗಳೂ ಮಾಲೀನ್ಯ ತಡೆಯುವಲ್ಲಿ ವಿಫಲವಾಗಿದ್ದು, ಇದಕ್ಕೆ ಪ್ರಸ್ತುತ  ಪರಿಸ್ಥಿತಿಯೇ ಸಾಕ್ಷಿ. ಬಹಿರಂಗವಾಗಿಯೇ ದೆಹಲಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಇದನ್ನೂ ಯಾರೂ ತಡೆಯುತ್ತಿಲ್ಲ. ರಸ್ತೆಗಳಲ್ಲಿ ರಾಜಾರೋಷವಾಗಿ ವಿಷಾನಿಲ ಉಗುಳುತ್ತಾ ವಾಹನಗಳು ಚಲಿಸುತ್ತಿದ್ದರೂ ಇದನ್ನೂ  ಯಾರೂ ಪ್ರಶ್ನಿಸುತ್ತಿಲ್ಲ. ಹೀಗಿರುವಾಗ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ. ಇದೇ ಮುಂದುವರಿದರೆ ಮುಂದಿನ ಪೀಳಿಗೆಗೆ ದೆಹಲಿ ಎಂಬುದು ಇತಿಹಾಸದ ಪುಟವಾಗುತ್ತದೆ ಎಂದೂ ಎನ್ ಜಿಚಿ ಎಚ್ಚರಿಕೆ ನೀಡಿದೆ. 
ಅಂತೆಯೇ ದೆಹಲಿಯಲ್ಲಿ ವಾಯು ಮಾಲೀನ್ಯ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಆಲಿಸಿದ ಎನ್ ಜಿಟಿ, ಹೆಲಿಕ್ಟಾಪರ್ ಗಳನ್ನು ಬಳಸಿ ಮೋಡ ಬಿತ್ತನೆ ಮಾಡಿ ಕೃತಕ ಮಳೆಯನ್ನಾದರೂ ಸೃಷ್ಟಿಸಬಾರದಾಗಿತ್ತೇ ಎಂದು  ಪ್ರಶ್ನಿಸಿದೆ.
ನವೆಂಬರ್ 14ರವರೆಗೂ ದೆಹಲಿಯಲ್ಲಿ ಕಟ್ಟಡ ಕಾಮಗಾರಿಗೆ ನಿಷೇಧ, ನಗರದೊಳಗೆ ದೊಡ್ಡ ವಾಹನಗಳ ಪ್ರವೇಶಕ್ಕೂ ನಿಷೇಧ
ಇದೇ ವೇಳೆ ಮುಂಜಾಗ್ರತಾ ಕ್ರಮವಾಗಿ ನವೆಂಬರ್ 14ರವೆರಗೂ ದೆಹಲಿಯಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿ ನಡೆಸದಂತೆ ಎನ್ ಜಿಟಿ ನಿಷೇಧ ಹೇರಿದ್ದು, ಅಂತೆಯೇ ದೆಹಲಿಯೊಳಗೆ ಯಾವುದೇ ರೀತಿಯ ದೊಡ್ಡ ವಾಹನಗಳು ಅಂದರೆ ಸರಕು ಸಾಗಾಣಿಕಾ ಟ್ರಕ್ ಗಳ ಪ್ರವೇಶಕ್ಕೂ ನಿಷೇಧ ಹೇರಿದೆ.
ಇದೇ ವೇಳೆ ಎನ್ ಜಿಟಿಗೆ ಅಫಿಡವಿಟ್ ಸಲ್ಲಿಸಿದ ದೆಹಲಿ ಸರ್ಕಾರ ಇಂದು ಅಥವಾ ನಾಳಿನ ವಾತಾವರಣವನ್ನು ಗಮನಿಸಿ ಸಮ-ಬೆಸ ಸಂಖ್ಯೆ ಯೋಜನೆ ಮತ್ತೆ ಜಾರಿಗೆ ತರುವುದಾಗಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್