ಅಮರಿಂದರ್ ಸಿಂಗ್ 
ದೇಶ

ಕೇಜ್ರಿವಾಲ್ ಅರ್ಥಮಾಡಿಕೊಳ್ಳದೇ ಎಲ್ಲದರ ಬಗ್ಗೆಯೂ ಮಾತನಾಡುವ ವಿಚಿತ್ರ ವ್ಯಕ್ತಿ: ಅಮರಿಂದರ್ ಸಿಂಗ್

ದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜಿಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ದೆಹಲಿ ಸಿಎಂ ಜೊತೆ ಚರ್ಚೆ ಮಾಡಿದ್ದ ಅಮರಿಂದರ್ ಸಿಂಗ್ ಈಗ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಎಲ್ಲಾ ವಿಷಯಗಳಲ್ಲಿಯೂ....

ನವದೆಹಲಿ: ದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜಿಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ದೆಹಲಿ ಸಿಎಂ ಜೊತೆ ಚರ್ಚೆ ಮಾಡಿದ್ದ ಅಮರಿಂದರ್ ಸಿಂಗ್ ಈಗ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಎಲ್ಲಾ ವಿಷಯಗಳಲ್ಲಿಯೂ ಅಭಿಪ್ರಾಯ ಹೊಂದಿರುವ ವಿಚಿತ್ರ ವ್ಯಕ್ತಿ ಎಂದು ಹೇಳಿದ್ದಾರೆ. 
ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಎಲ್ಲದರ ಬಗ್ಗೆಯೂ ಮಾತನಾಡುವ ವಿಚಿತ್ರ ವ್ಯಕ್ತಿ ಕೇಜ್ರಿವಾಲ್ ಎಂದಿರುವ ಅಮರಿಂದರ್ ಸಿಂಗ್, 20 ಮಿಲಿಯನ್ ನಷ್ಟು ಭತ್ತದ ತ್ಯಾಜ್ಯವಿದೆ, ಅದನ್ನು ಎಲ್ಲಿ ಶೇಖರಣೆ ಮಾಡಿಕೊಳ್ಳಲು ರೈತರಿಗೆ ಹೇಳಬೇಕು, ಈ ಸಮಸ್ಯೆ ಕೇಜ್ರಿವಾಲ್ ಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ. 
ದೆಹಲಿಯಲ್ಲಿನ ವಾಯುಮಾಲಿನ್ಯ ಹಾಗೂ ದಟ್ಟ ಮಂಜು ಆವರಿಸಿರುವುದಕ್ಕೆ ಸಂಬಂಧಿಸಿದಂತೆ ಹರ್ಯಾಣ ಹಾಗೂ ಪಂಜಾಬ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹಲವು ದಿನಗಳಿಂದ ಯತ್ನಿಸುತ್ತಿರುವುದಾಗಿ ಕೇಜ್ರಿವಾಲ್ ಟ್ವಿಟರ್ ನಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮರಿಂದರ್ ಸಿಂಗ್, ಈ ಸಮಸ್ಯೆಗೆ ಕೇಂದ್ರ ಸರ್ಕಾರದಿಂದಲೇ ಪರಿಹಾರ ಸಿಗಬೇಕು ಎಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ